ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗಳಿಗೆ ಏ. 10ರಿಂದ ಮೇ 15ರವರೆಗೆ ಬೇಸಿಗೆ ರಜೆ: ಸಾರ್ವಜನಿಕ ಶಿಕ್ಷಣ ಇಲಾಖೆ

Last Updated 24 ಫೆಬ್ರುವರಿ 2022, 5:18 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷ (2021–22) ಏಪ್ರಿಲ್‌ 9ಕ್ಕೆ ಮುಕ್ತಾಯಗೊಳ್ಳಲಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 10ರಿಂದ ಮೇ 15ರವರೆಗೆ ಬೇಸಿಗೆ ರಜೆ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಮೇ 16ರಿಂದ ಮುಂದಿನ ಶೈಕ್ಷಣಿಕ ವರ್ಷ (2022–23) ಆರಂಭವಾಗಲಿದೆ.

ಅಲ್ಲದೆ, ಕೋವಿಡ್‌ ಕಾರಣ 2019–20, 2020–21 ಮತ್ತು 2021–22 ಈ ಮೂರೂ ಶೈಕಣಿಕ ಸಾಲಿನಲ್ಲಿ ಭೌತಿಕ ತರಗತಿಗಳು ನಡೆಯದೆ ವಿದ್ಯಾರ್ಥಿಗಳಿಗೆ ಆಗಿರುವ ಕಲಿಕಾ ಕೊರತೆಯನ್ನು ಸರಿತೂಗಿಸಲು ಮುಂದಿನ ವರ್ಷ ಶೈಕ್ಷಣಿಕ ವರ್ಷದಲ್ಲಿ ‘ಕಲಿಕಾ ಚೇತರಿಕೆ (ಸೇತುಬಂಧ) ಕಾರ್ಯಕ್ರಮ ಆಯೋಜಿಸಲು ಕೂಡಾ ಇಲಾಖೆ ನಿರ್ಧರಿಸಿದೆ. ಈ ಕಾರ್ಯಕ್ರಮ ಮೇ 16ರಿಂದ ಆರಂಭವಾಗಲಿದೆ.

ಪ್ರಸಕ್ತ ವರ್ಷ ಏಪ್ರಿಲ್‌ 9ರಂದು ಶೈಕ್ಷಣಿಕ ವರ್ಷ ಕೊನೆಗೊಳ್ಳಲಿರುವುದರಿಂದ ಪ್ರಾಥಮಿಕ ಶಾಲೆಗಳಲ್ಲಿ (1–5, 1–7 ಮತ್ತು 8ನೇ ತರಗತಿ ಇರುವ ಶಾಲೆಗಳು) ಮಾರ್ಚ್‌ 24ರಿಂದ ಏಪ್ರಿಲ್‌ 4ರವರೆಗೆ ವಾರ್ಷಿಕ ಪರೀಕ್ಷೆ ನಡೆಸಿ, ಏ. 9ರಂದು ಫಲಿತಾಂಶ ಪ್ರಕಟಿಸಬೇಕು. 8–9 ತರಗತಿಗಳಿರುವ ಪ್ರೌಢ ಶಾಲೆಗಳಲ್ಲಿ ಮಾರ್ಚ್‌ 21ರಿಂದ ಮಾರ್ಚ್‌26ರವರೆಗೆ ವಿಷಯವಾರು ಪರೀಕ್ಷೆ, ಮಾರ್ಚ್‌29ರಂದು ಭಾಗ–2 ( ದೈಹಿಕ ಶಿಕ್ಷಣ, ಇತರ) ಪರೀಕ್ಷೆ ನಡೆಸಿ, ಏಪ್ರಿಲ್‌ 7ರಂದು ಫಲಿತಾಂಶ ಪ್ರಕಟಿಸಬೇಕು ಎಂದು ಇಲಾಖೆ ಸೂಚಿಸಿದೆ.

ಸಾಮಾನ್ಯವಾಗಿ ಶೈಕ್ಷಣಿಕ ವರ್ಷ ಮೇ 29ರಿಂದ ಆರಂಭವಾಗಿ ಏಪ್ರಿಲ್‌ 10ಕ್ಕೆ ಮುಕ್ತಾಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT