ಸೋಮವಾರ, ಜನವರಿ 25, 2021
19 °C

ರಾಜ್ಯದಲ್ಲಿ ಮತ್ತೆ ವಿದ್ಯುತ್‌ ದರ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎರಡು ತಿಂಗಳ ಅಂತರದಲ್ಲಿಯೇ ಬೆಸ್ಕಾಂ ಮತ್ತೆ ವಿದ್ಯುತ್‌ ದರ ಹೆಚ್ಚಳ ಮಾಡಲಿದೆ. ಯುನಿಟ್‌ಗೆ 8 ಪೈಸೆ ಹೆಚ್ಚಿಸಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಅನುಮತಿ ನೀಡಿದೆ.

ಬೇರೆ ಎಸ್ಕಾಂಗಳಿಗೆ ಹೋಲಿಸಿದರೆ, ಬೆಸ್ಕಾಂ ಹೆಚ್ಚು ಶುಲ್ಕ ನಿಗದಿ ಮಾಡಿದೆ. ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ (ಎಫ್‌ಎಸಿ) ಭರಿಸ
ಬೇಕಾಗಿರುವುದರಿಂದ 8 ಪೈಸೆ ಜಾಸ್ತಿ ಮಾಡಲಾಗಿದೆ ಎಂದು ಬೆಸ್ಕಾಂ ಹೇಳಿದೆ.

ಇಂಧನ ವೆಚ್ಚ 1 ಪೈಸೆಯಿಂದ 8 ಪೈಸೆಗೆ ಹೆಚ್ಚಾಗಿದ್ದರಿಂದ ಎಫ್‌ಎಸಿ ಹೆಚ್ಚಳಕ್ಕೆ ಅನುಮತಿ ನೀಡಬೇಕು ಎಂದು ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂ) ನವೆಂಬರ್‌ನಲ್ಲಿ ಕೆಇಆರ್‌ಸಿ ಬೇಡಿಕೆ ಸಲ್ಲಿಸಿದ್ದವು.

ಎಸ್ಕಾಂಗಳ ಮನವಿ ಪುರಸ್ಕರಿಸಿರುವ ಕೆಇಆರ್‌ಸಿ, ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪನಿ, ಮೆಸ್ಕಾಂ ಮತ್ತು ಜೆಸ್ಕಾಂಗೆ ಯುನಿಟ್‌ಗೆ 5 ಪೈಸೆಯಂತೆ, ಹೆಸ್ಕಾಂಗೆ 4 ಪೈಸೆಯಂತೆ ಹೆಚ್ಚಳ ಮಾಡಲು ಅನುಮತಿ ನೀಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು