ಶನಿವಾರ, ನವೆಂಬರ್ 28, 2020
17 °C
ಮೈಸೂರಿನಲ್ಲಿ ಚಿಕಿತ್ಸೆಗೆ ದಾಖಲು, ಕಾಫಿ ತೋಟಕ್ಕೆ ತೆರಳಿದ್ದ ವೇಳೆ ಘಟನೆ

ಪರಿಸರವಾದಿ ಸಿ.ಪಿ.ಮುತ್ತಣ್ಣ ಮೇಲೆ ಕಾಡಾನೆ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಣಿಕೊಪ್ಪಲು (ಕೊಡಗು ಜಿಲ್ಲೆ): ಅತ್ತೂರಿನಲ್ಲಿ ಬುಧವಾರ ಬೆಳಿಗ್ಗೆ ನಡೆದ ಕಾಡಾನೆ ದಾಳಿಯಿಂದ ಪರಿಸರ ಹೋರಾಟಗಾರ, ನಿವೃತ್ತ ಕರ್ನಲ್‌ ಚೆಪ್ಪುಡೀರ ಮುತ್ತಣ್ಣ ಅವರು ಗಾಯಗೊಂಡಿದ್ದಾರೆ.

ಮುತ್ತಣ್ಣ ಬೆಳಿಗ್ಗೆ 10 ಗಂಟೆ ಸುಮಾರಿಗೆ ಮನೆಯ ಪಕ್ಕದಲ್ಲಿರುವ ಕಾಫಿ ತೋಟಕ್ಕೆ ತೆರಳಿದ್ದರು. ಆಗ ಕಾಡಾನೆ ಕಂಡು ಓಡುವ ಭರದಲ್ಲಿ ಮತ್ತಣ್ಣ ಕೆಳಗೆ ಬಿದ್ದಿದ್ದಾರೆ. ಕಾಡಾನೆಯು ಮುತಣ್ಣ ಅವರ ಕಾಲು ತುಳಿದು ಮುಂದಕ್ಕೆ ಸಾಗಿದೆ. ಇದರಿಂದ ಮುತ್ತಣ್ಣ ಅವರ ಬಲ ಗಾಲಿಗೆ ಬಲವಾದ ಪೆಟ್ಟು ಬಿದ್ದಿದೆ. ಮೊಬೈಲ್ ಮೂಲಕ ಪತ್ನಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.

ಗೋಣಿಕೊಪ್ಪಲು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರು ಕೊಡಗಿನ ಮಾಜಿ ಮುಖ್ಯಮಂತ್ರಿ ಸಿ.ಎಂ.ಪೂಣಚ್ಚ ಅವರ ಮಗ. ಕೂರ್ಗ್‌ ವೈಲ್ಡ್‌ಲೈಫ್‌ ಸೊಸೈಟಿಯ ಮಾಜಿ ಅಧ್ಯಕ್ಷ. ಕೊಡಗಿನ ಪರಿಸರ ಉಳಿಯ ಬೇಕು. ಆನೆಗಳು ಸೇರಿದಂತೆ ವನ್ಯಜೀವಿಗಳ ಬದುಕಿಗೆ ತೊಂದರೆ ಆಗಬಾರದು ಎಂದು ನಿರಂತರವಾಗಿ ಹೋರಾಟ ಮಾಡುತ್ತಾ ಬರುತ್ತಿದ್ದಾರೆ. ಕಾಡಾನೆಗಳ ಬಗ್ಗೆ ಅಪಾರವಾದ ಪ್ರೀತಿ ಇಟ್ಟುಕೊಂಡಿದ್ದಾರೆ ಮುತ್ತಣ್ಣ. ಘಟನೆ ತಿಳಿದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

‘ಮುತ್ತಣ್ಣ ಅವರ ಜೀವಕ್ಕೆ ಅಪಾಯವಿಲ್ಲ. ಬಲ ಕಾಲಿಗೆ ಪೆಟ್ಟು ಬಿದ್ದಿದೆ. ಅವರ ಚಿಕಿತ್ಸೆಯ ಎಲ್ಲ ವೆಚ್ಚಗಳನ್ನು ಸರ್ಕಾರದಿಂದ ಭರಿಸಿ ಕೊಡಲಾಗುವುದು’ ಎಂದು ಪೊನ್ನಂಪೇಟೆ ಆರ್‌ಎಫ್‌ಒ ರಾಜಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು