ಬುಧವಾರ, ಜೂನ್ 29, 2022
25 °C
ಬಾಗಲಕೋಟೆ: ಶಾಸಕ ಕೆ.ಎಸ್.ಈಶ್ವರಪ್ಪ ಪ್ರಶ್ನೆ

ಪಠ್ಯದಲ್ಲಿ ಜಿನ್ನಾ ವಿಚಾರ ಸೇರಿಸಬೇಕಿತ್ತಾ? ಶಾಸಕ ಕೆ.ಎಸ್.ಈಶ್ವರಪ್ಪ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಶಾಲಾ ಪಠ್ಯದಲ್ಲಿ ಆರ್‌ಎಸ್‌ಎಸ್ ಸಂಸ್ಥಾಪಕ ಡಾ.ಕೇಶವ ಹೆಡ್ಗೇವಾರ್ ಬದಲಿಗೆ ಮೊಹಮ್ಮದ್ ಅಲಿ ಜಿನ್ನಾ, ಈಶ್ವರ ಲಿಂಗ ಒಡೆದ ಔರಂಗಜೇಬನ ಕುರಿತ ವಿಷಯಗಳ ಸೇರಿಸಬೇಕಿತ್ತಾ? ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಸಮಾಜ ಒಂದು ಮಾಡುವ ಪ್ರಯತ್ನವನ್ನು ಹೆಡ್ಗೇವಾರ್ ಮಾಡಿದ್ದರು. ಹೀಗಾಗಿ ದೇಶದ ಸಂಸ್ಕೃತಿ ವಿಚಾರದಲ್ಲಿ ಹೆಡ್ಗೇವಾರ್ ಮಾಡಿರುವ ಭಾಷಣದ ಒಂದಂಶ ಪಠ್ಯದಲ್ಲಿ ಸೇರಿಸಲಾಗಿದೆ ಎಂದರು.

 ಇಲ್ಲಿಯವರೆಗೆ ಮೈಸೂರು ಹುಲಿ ಟಿಪ್ಪು ಸುಲ್ತಾನ್, ಅಲೆಗ್ಸಾಂಡರ್ ದಿ ಗ್ರೇಟ್ ಇವುಗಳನ್ನು ನಮ್ಮ ಮಕ್ಕಳು ಓದುತ್ತಿದ್ದರು. ಯಾರು ನಮ್ಮ ದೇಶವನ್ನು ಹಾಳು ಮಾಡಿದ್ರೋ, ನಮ್ಮ ಸಂಸ್ಕೃತಿಯನ್ನು ಒಡೆದು ಪುಡಿ ಪುಡಿ ಮಾಡಿದ್ರೋ ಅಂಥವರ ವೈಭವೀಕರಣ ನಮ್ಮ ಪಠ್ಯದಲ್ಲಿ ಇತ್ತು. ಅದನ್ನು ನಮ್ಮ ಮಕ್ಕಳು ಓದುತ್ತಿದ್ದರು ಎಂದು ವ್ಯಂಗ್ಯವಾಡಿದರು.

ಹೆಡ್ಗೇವಾರ್ ಹಿಂದುತ್ವದ ವಿಚಾರ ಹರಡದೇ ಇದ್ದಿದ್ರೇ ಈ ದೇಶ ತುಂಡು ತುಂಡಾಗಿ ಹೋಗ್ತಿತ್ತು. ಹಿಂದುತ್ವ ಇಷ್ಟೂ ಜಾಗೃತವಾಗಿರೋವಾಗಲೇ ರಾಷ್ಟ್ರದ್ರೋಹಿಗಳು, ಭಯೋತ್ಪಾದಕರು ಆಟ ಆಡ್ತಿದಾರೆ.

ವಿಚಾರವಾದಿಗಳು ಅಂತಾ ಹೇಳಿಕೊಂಡು ತಿರುಗಾಡೋರಿಗೆ ಅದೇ ಆನಂದ. ಟಿಪ್ಪು ಸುಲ್ತಾನ್ ಬಗ್ಗೆ ಹೇಳಿದ್ರೆ ಅದೇ ಆನಂದ. ಯಾರು ಈ ದೇಶವನ್ನು ಹಾಳು ಮಾಡಿದ್ರೋ ಅವ್ರದೇ ಪಠ್ಯ ಇರಬೇಕೆನ್ನುವ ಆಸೆ ಅವರದ್ದು ಎಂದು ಛೇಡಿಸಿದರು. 

ಪಠ್ಯ ಪುಸ್ತಕ ರಚನಾ ಸಮಿತಿ ರಾಷ್ಟ್ರಭಕ್ತಿಯನ್ನು ಮಕ್ಕಳಿಗೆ ಹೇಳಿಕೊಡಲು ತೀರ್ಮಾನ ಮಾಡಿದೆ. ಹಾಗಾಗಿ ರಾಷ್ಟ್ರೀಯ ಮಹಾನ್ ಪುರುಷರ ವಿಚಾರವನ್ನು ಮುಂದುವರೆಸಲಾಗ್ತಿದೆ ತಪ್ಪೇನು? ಎಂದರು.

ಓದಿ... ಆರ್‌ಎಸ್‌ಎಸ್‌ನವರು ಶಿಕ್ಷಣ ಸಚಿವರ ದಾರಿ ತಪ್ಪಿಸಿದ್ದಾರೆಯೇ?: ದೇವನೂರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು