ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ನೀರುನಾಯಿಗಳ ಚಿನ್ನಾಟ.. ವಿಡಿಯೊ ನೋಡಿ

Last Updated 16 ಜುಲೈ 2022, 13:20 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಇಲ್ಲಿನ ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಈಗ ನೀರುನಾಯಿಗಳು ಚಿನ್ನಾಟವಾಡುತ್ತ ಸಂಭ್ರಮಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಸಸ್ತನಿ ಜಾತಿಗೆ ಸೇರಿದ ನೀರುನಾಯಿಗಳು ಬಹಳ ಸೂಕ್ಷ್ಮವಾದ ಜೀವಿಗಳು. ಅವುಗಳು ಮನುಷ್ಯರ ಕಣ್ಣಿಗೆ ಬೀಳುವುದು ಬಹಳ ಅಪರೂಪ. ಬಂಡೆಗಲ್ಲುಗಳ ನಡುವೆ ಹರಿವ ನೀರಿನ ಮಧ್ಯೆ ಪ್ರಶಾಂತ ವಾತಾವರಣದಲ್ಲಿ ಇರುತ್ತವೆ. ಆದರೆ, ಈಗ ತುಂಗಭದ್ರೆ ಮೈದುಂಬಿಕೊಂಡು ಭೋರ್ಗರೆಯುತ್ತಿರುವ ಕಾರಣ ಅವುಗಳು ಜಲಾಶಯದ‌ ನದಿ ದಂಡೆಗೆ ಬಂದು ಸಂಭ್ರಮಿಸುತ್ತಿವೆ. ಚಿನ್ನಾಟವಾಡುತ್ತಿವೆ.

ಒಂದೆರಡಲ್ಲ ಗುಂಪು ಗುಂಪಾಗಿ

ನದಿಯ ಅಲೆಗಳ ಅಬ್ಬರದ ನಡುವೆಯೂ ನಲಿದಾಡುತ್ತಿರುವ ಅವುಗಳನ್ನು ಕಣ್ತುಂಬಿಕೊಳ್ಳುವುದೇ ಸಂಭ್ರಮ. ಜಲಾಶಯಕ್ಕೆ ಭೇಟಿ ಕೊಡುತ್ತಿರುವ ಪ್ರವಾಸಿಗರನ್ನು ಈಗ ನೀರುನಾಯಿಗಳು ಆಕರ್ಷಿಸುತ್ತಿವೆ.

ಅಂದಹಾಗೆ, ತುಂಗಭದ್ರಾ ಜಲಾಶಯದಿಂದ ಕಂಪ್ಲಿವರೆಗಿನ ಪ್ರದೇಶ ನೀರುನಾಯಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದೆ. ಈ ಭಾಗದಲ್ಲಿ ತುಂಗಭದ್ರಾ ನದಿ ಹರಿಯುವುದರಿಂದ ನೀರುನಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT