ಗುರುವಾರ , ಅಕ್ಟೋಬರ್ 22, 2020
26 °C

ಡಿಸಿಎಂ ಅವಕಾಶವೂ ಸಿಗಬಹುದು: ಶ್ರೀರಾಮುಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Sriramalu

ಬಳ್ಳಾರಿ: ‘ಬಿಜೆಪಿ ಸರ್ಕಾರ ರಚನೆಯಾದ ಸಂದರ್ಭದಲ್ಲೇ ಸಮಾಜಕಲ್ಯಾಣ ಖಾತೆಯನ್ನು ಕೇಳಿದ್ದರೂ ಈಗ ದೊರಕಿದೆ. ಉಪಮುಖ್ಯಮಂತ್ರಿಯಾಗುವ ಅವಕಾಶವೂ ಮುಂದಿನ ದಿನಗಳಲ್ಲಿ ಬರಬಹುದು. ಅದಕ್ಕಾಗಿ ಕಾಯಬೇಕಷ್ಟೇ’ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು.

ನಗರದಲ್ಲಿ ಶುಕ್ರವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸದ್ಯ ಪಕ್ಷದ ಮುಂದೆ ಚುನಾವಣೆಗಳನ್ನು ಎದುರಿಸುವ ಸವಾಲಿದೆ. ಪಕ್ಷ ಎರಡೂ ಉಪಚುನಾವಣೆಗಳಲ್ಲಿ ಗೆಲ್ಲುತ್ತದೆ. ನಂತರ ನಮಗೆ ಶಕ್ತಿ ಬರುತ್ತದೆ. ಆಗ ಅವಕಾಶಗಳನ್ನು ಕೇಳಲು ಸಾಧ್ಯ’ ಎಂದರು.

‘ನನ್ನನ್ನು ಪಕ್ಷ ಎಂದಿಗೂ ಬಿಟ್ಟುಕೊಟ್ಟಿಲ್ಲ. ಕೇಳಿದ ಇಲಾಖೆಯನ್ನೇ ಕೊಟ್ಟಿರುವುದರಿಂದ ಕೆಲಸ ಮಾಡಲು ಅವಕಾಶವಾಗುತ್ತದೆ. ಆರೋಗ್ಯ ಇಲಾಖೆಯಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇನೆ. ಹೀಗಾಗಿಯೇ ಸಮಾಜ ಕಲ್ಯಾಣ ಇಲಾಖೆಯನ್ನು ಕೊಟ್ಟಿದ್ದಾರೆ’ ಎಂದರು.

‘ದೇವರಾಜ ಅರಸ್‌ ಅವರಿಂದ ಇಲ್ಲಿವರೆಗೆ ಮುಖ್ಯಮಂತ್ರಿಗಳಾದವರು ಕೈಗೊಂಡ ತೀರ್ಮಾನಗಳ ಬಗ್ಗೆ ಅಧ್ಯಯನ ಮಾಡುತ್ತಿರುವೆ. ತಳಸಮುದಾಯದ ಜನರಿಗೆ ಸಹಾಯ ಮಾಡಲು ಸಮಾಜ ಕಲ್ಯಾಣ ಇಲಾಖೆಯಲ್ಲಿ ಅವಕಾಶವಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು