ಸೋಮವಾರ, ಜನವರಿ 17, 2022
27 °C

ಅಜೀಂ ಪ್ರೇಮ್‌ಜಿ ದಾವೆ: ಇಬ್ಬರು ವಕೀಲರಿಗೆ 2 ತಿಂಗಳು ಜೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಪ್ರೊ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಮತ್ತು ಅವರ ಟ್ರಸ್ಟ್‌ ವಿರುದ್ಧ ತನಿಖೆ ನಡೆಸುವಂತೆ ಕೋರಿ ಹಲವು ಸುಳ್ಳು ಮೊಕದ್ದಮೆ ಹೂಡಿದ್ದ ಚೆನ್ನೈನ ಸರ್ಕಾರೇತರ ಸಂಸ್ಥೆ, ’ಇಂಡಿಯಾ ಅವೇಕ್ ಫಾರ್ ಟ್ರಾನ್ಸಪರೆನ್ಸಿ ಸಂಸ್ಥೆ‘ ಪ್ರತಿನಿಧಿಸುತ್ತಿದ್ದ ಚೆನ್ನೈನ ವಕೀಲರಾದ ಆರ್.ಸುಬ್ರಮಣಿಯನ್‌ ಮತ್ತು ಪಿ.ಸದಾನಂದ ಅವರಿಗೆ ರಾಜ್ಯ ಹೈಕೋರ್ಟ್ ಎರಡು ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ ತಲಾ ₹ 2 ಸಾವಿರ ದಂಡ ವಿಧಿಸಿದೆ.

ಈ ಕುರಿತಂತೆ ವಿಪ್ರೊ ಗ್ರೂಪ್‌ ಸಂಸ್ಥಾಪಕ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಸೇರಿದಂತೆ ಮೂವರು ಸಲ್ಲಿಸಿದ್ದ ಕ್ರಿಮಿನಲ್ ನ್ಯಾಯಾಂಗ ನಿಂದನೆ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದ್ದು, ’ಆರೋಪಿಗಳು ದಂಡ ಪಾವತಿಸದಿದ್ದರೆ ಪುನಃ ಒಂದು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು‘ ಎಂದು ಆದೇಶಿಸಿದೆ.

ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಸಮಯ ನೀಡಬೇಕೆಂದು ಆರೋಪಿಗಳು ಕೋರಿದ್ದರಿಂದ ನ್ಯಾಯ
ಪೀಠ, ನಾಲ್ಕು ವಾರಗಳ ಕಾಲ ತೀರ್ಪು ಅಮಾನತ್ತಿನಲ್ಲಿರಿಸಿದೆ. ಇಬ್ಬರೂ ವಕೀಲರು ‌‌‌ಅಜೀಂ ಪ‍್ರೇಮ್‌ಜಿ ಮತ್ತು ವಿಪ್ರೊ ಕಂಪನಿ ವಿರುದ್ಧ ಯಾವುದೇ ನ್ಯಾಯಾಲಯದಲ್ಲಿ ಯಾವುದೇ ಬಗೆಯ ಕೇಸ್ ದಾಖಲಿಸದಂತೆಯೂ ನ್ಯಾಯಪೀಠ ನಿರ್ಬಂಧ ವಿಧಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.