ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಮರ’ ಅಪ್ಪುವಿನ ಅಭಿಮಾನದ ಸ್ಮರಣೆ

ಪುನೀತ್ ರಾಜ್‌ಕುಮಾರ್ ಅಗಲಿ ಒಂದು ವರ್ಷ l ಸಮಾಧಿ ಸ್ಥಳಕ್ಕೆ ಹರಿದು ಬಂದ ಜನಸಾಗರ
Last Updated 29 ಅಕ್ಟೋಬರ್ 2022, 21:15 IST
ಅಕ್ಷರ ಗಾತ್ರ

ಬೆಂಗಳೂರು: ಪುನೀತ್‌ ಅವರ ಹತ್ತಾರು ಭಾವ ಭಂಗಿಗಳ ಬೃಹತ್‌ ಕಟೌಟ್‌ಗಳು. ಅವುಗಳಲ್ಲಿ ರಾರಾಜಿಸಿದ ಅಭಿಮಾನದ ಹಾರಗಳು. ಅಪ್ಪು ಸಮಾಧಿಗೆ ತುಳಸಿ ಹಾರ ಮತ್ತು ಬಿಳಿ ಹೂಗಳ ಸಿಂಗಾರ. ಭಾವಚಿತ್ರದ ಸುತ್ತ ಅಪ್ಪಟ ‘ಗಂಧದಗುಡಿ’ ಥೀಮ್‌ನ ಅಲಂಕಾರ. ಕಂಗೊಳಿಸುತ್ತಿದ್ದ ಅಪ್ಪು ಅವರ ನಗುಮೊಗದ ಭಾವಚಿತ್ರ. ಗೌರವನಮನ ಸಲ್ಲಿಸಲು ಬರುತ್ತಿದ್ದ ಸಾವಿರಾರು ಅಭಿಮಾನಿಗಳ ಸಾಲು...

ಇದು ನಗರದ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಅಪ್ಪು ಸಮಾಧಿ ಬಳಿ ಕಂಡ ದೃಶ್ಯ. ನಟ ಪುನೀತ್‌ ರಾಜ್‌ಕುಮಾರ್‌ ಅವರು ಅಗಲಿಅ. 29ಕ್ಕೆ ಒಂದು ವರ್ಷ ತುಂಬಿದೆ. ಕಳೆದ ವರ್ಷ ಇದೇ ದಿನ ಹೃದಯಾಘಾತದಿಂದ ಅವರು ನಿಧನರಾಗಿದ್ದರು.

ಅಂದಿನಿಂದ ಇಂದಿನವರೆಗೂ ‘ಅಪ್ಪು’ ಅವರ ಅಭಿನಯದ ಕೊನೆಯ ಚಿತ್ರಗಳ ಬಿಡುಗಡೆ (ಜೇಮ್ಸ್‌, ಲಕ್ಕಿಮ್ಯಾನ್‌, ಗಂಧದ ಗುಡಿ), ಅವರ ಹೆಸರಿನಲ್ಲಿ ಸಮಾಜಸೇವಾ ಕಾರ್ಯಗಳ ಮೂಲಕ ಚಿತ್ರರಂಗ ಮತ್ತು ಅವರ ಅಭಿಮಾನಿಗಳು ಪುನೀತ್‌ ಅವರನ್ನು ಅಮರರನ್ನಾಗಿಸಿದ್ದರು.

ಇಂದು ಅದೇ ಅಭಿಮಾನ ಮತ್ತೆ ಉಕ್ಕಿ ಹರಿಯಿತು.ಪುನೀತ್‌ ಅವರ ಹೆಸರಿನಲ್ಲಿ ಅನ್ನದಾನ, ರಕ್ತದಾನ, ನೇತ್ರದಾನ ನಡೆದವು. ಸಂಗೀತ ತಂಡವೊಂದು ಪುನೀತ್‌ ಚಿತ್ರಗಳ ಗೀತಗಾಯನ ನಡೆಸಿಕೊಟ್ಟಿತು.

ಪುನೀತ್‌ ಪತ್ನಿ ಅಶ್ವಿನಿ,ಕಿರಿಯ ಪುತ್ರಿ ವಂದಿತಾ, ಸಹೋದರರಾದ ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಸೇರಿ ಕುಟುಂಬದ ಸದಸ್ಯರು, ಚಿತ್ರರಂಗದ ಗಣ್ಯರು ಸಮಾಧಿಗೆ ಗೌರವ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT