ಸೋಮವಾರ, ಜೂನ್ 27, 2022
21 °C

ಪ್ರಥಮ ಪಿಯುಸಿ: ಅಸೈನ್‌ಮೆಂಟ್‌ ಆಧರಿಸಿ ಅಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪ್ರಥಮ ಪಿಯುಸಿ ಪರೀಕ್ಷೆಗಳನ್ನು ರದ್ದುಪಡಿಸಿರುವುದರಿಂದ, ಈ ವಿದ್ಯಾರ್ಥಿಗಳಿಗೆ ಅಸೈನ್‌ಮೆಂಟ್‌ಗಳನ್ನು ನೀಡಿ, ಮೌಲ್ಯಮಾಪನ ಮಾಡಿ ಎಸ್‌ಎಟಿಎಸ್ (ವಿದ್ಯಾರ್ಥಿಗಳ ಸಾಧನೆ ಟ್ರ್ಯಾಕಿಂಗ್‌ ವ್ಯವಸ್ಥೆ) ಪೋರ್ಟಲ್‌ನಲ್ಲಿ ಅಳವಡಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಎಲ್ಲ ಕಾಲೇಜುಗಳ ಪ್ರಾಚಾರ್ಯರು ಇಲಾಖೆಯ ಜಾಲತಾಣದಲ್ಲಿ ನೀಡಿದ ಎರಡು ಪ್ರಶ್ನೆ ಪತ್ರಿಕೆಗಳಿಗೆ ಹಾಳೆಗಳಲ್ಲಿ ಉತ್ತರಿಸಿ ಸ್ಕ್ಯಾನ್‌, ವಾಟ್ಸ್ಆ್ಯಪ್‌, ಇ– ಮೇಲ್‌  ಅಥವಾ ಅಂಚೆ ಮೂಲಕ ಸಂಬಂಧಿಸಿದ ಉಪನ್ಯಾಸಕರಿಗೆ ಸಲ್ಲಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಬೇಕು. ಎರಡೂ ಅಸೈನ್‌ಮೆಂಟ್‌ಗಳನ್ನು ಆಯಾ ವಿಷಯದ ಉಪನ್ಯಾಸಕರು ಮಾಲ್ಯಮಾಪನ ಮಾಡಿ ಅಂಕಗಳನ್ನು ಪೋರ್ಟಲ್‌ನಲ್ಲಿ ನಮೂದಿಸುವಂತೆ ಸೂಚಿಸಲಾಗಿದೆ.

ಮಾದರಿ ಪ್ರಶ್ನೆ ಪತ್ರಿಕೆಗಳ ಲಿಂಕ್‌ ಅನ್ನು ವಿದ್ಯಾರ್ಥಿಗಳ ಮೊಬೈಲ್‌ ಸಂಖ್ಯೆಗೆ ಕಳುಹಿಸಬೇಕು. ಪ್ರಾಯೋಗಿಕ ವಿಷಯಕ್ಕೆ ಸಂಬಂಧಿಸಿದಂತೆ ಆಯಾ ವಿಷಯಗಳ ಉಪನ್ಯಾಸಕರು ಈ ಹಿಂದೆ ನಡೆಸಿದ ಪ್ರಾಯೋಗಿಕ ತರಗತಿಗಳ ಆಧಾರದಲ್ಲಿ ನಿಷ್ಪಕ್ಷಪಾತವಾಗಿ ಅಂಕಗಳನ್ನು ನೀಡಬೇಕು ಎಂದೂ ಸೂಚನೆ ನೀಡಲಾಗಿದೆ.

ಮೊದಲ ಅಸೈನ್‌ಮೆಂಟ್‌ನ್ನು ಇದೇ 10ರಿಂದ 20ರೊಳಗೆ ವಿದ್ಯಾರ್ಥಿಗಳು ಕಳುಹಿಸಬೇಕು. 20ರಿಂದ 25ರ ಒಳಗೆ ಉಪನ್ಯಾಸಕರು ಮೌಲ್ಯಮಾಪನ ಮಾಡಬೇಕು. ಎರಡನೇ ಅಸೈನ್‌ಮೆಂಟ್‌ ಅನ್ನು 26ರಿಂದ ಜುಲೈ 5ರೊಳಗೆ ವಿದ್ಯಾರ್ಥಿಗಳು ಸಲ್ಲಿಸಬೇಕು. ಜುಲೈ 6ರಿಂದ 10ರೊಳಗೆ ಮೌಲ್ಯಮಾಪನ ನಡೆಸಬೇಕು. ಎರಡೂ ಅಸೈನ್‌ಮೆಂಟ್‌ಗಳನ್ನು ಆಧರಿಸಿ ಜುಲೈ 11ರಿಂದ 15ರ ಒಳಗೆ ಅಂಕಗಳಾಗಿ ಪರಿವರ್ತಿಸಬೇಕು. ಜುಲೈ 20ರ ಒಳಗೆ ಪೋರ್ಟಲ್‌ಗೆ ನಮೂದಿಸಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಸೂಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು