ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮ್ಮನಹಳ್ಳಿಯಲ್ಲಿ ಸಾರ್ವಜನಿಕ ವೈ–ಫೈ: ಸೌಲಭ್ಯ ಪಡೆದ ರಾಜ್ಯದ ಮೊದಲ ಗ್ರಾಮ

Last Updated 28 ಫೆಬ್ರುವರಿ 2022, 19:33 IST
ಅಕ್ಷರ ಗಾತ್ರ

ಮೈಸೂರು: ಸಾರ್ವಜನಿಕ ವೈ–ಫೈ ನೀತಿಯಡಿ ರಾಜ್ಯದಲ್ಲಿ ಬಿಎಸ್‌ಎನ್‌ಎಲ್‌ ಮೊದಲ ‘ಸಾರ್ವಜನಿಕ ದತ್ತಾಂಶ ಕೇಂದ್ರ’ವನ್ನು (ಪಿಡಿಒ) ತಾಲ್ಲೂಕಿನ ರಮ್ಮನಹಳ್ಳಿಯಲ್ಲಿ ಸ್ಥಾಪಿಸಿದೆ. ಇಡೀ ಗ್ರಾಮವು ವೈ-ಫೈ ವಲಯವಾಗಿದ್ದು, ವಿವಿಧ ಯೋಜನೆಯಡಿ 50 ಎಂಬಿಪಿಎಸ್‌ ವೇಗದವರೆಗೆ ಇಂಟರ್‌ನೆಟ್‌ ಸಂಪರ್ಕ ಪಡೆಯಬಹುದು.

ಬಿಎಸ್‌ಎನ್‌ಎಲ್‌ ಮೈಸೂರು ದೂರಸಂಪರ್ಕ ವೃತ್ತವು ಆಪ್ಟಿಕಲ್‌ ಫೈಬರ್‌ ಸಂಪರ್ಕದ ಮೂಲಕ ಎಂಟು ಕಡೆ ವೈಫೈ ಕೇಂದ್ರ ಸ್ಥಾಪಿಸಿದ್ದು, 32 ಕಡೆ ವೈ–ಫೈ ಹಾಟ್‌ಸ್ಪಾಟ್‌ ಲಭ್ಯವಿರಲಿವೆ.

‘ಬಿಎಸ್‌ಎನ್‌ಎಲ್‌ ವೈಫೈ 69’, ‘ಬಿಎಸ್‌ಎನ್‌ಎಲ್‌ ವೈಫೈ 9’ ಸೇರಿ ಐದು ಯೋಜನೆಗಳಿದ್ದು, ಮೊಬೈಲ್‌ ಫೋನ್ ಅಥವಾ ಲ್ಯಾಪ್‌ಟಾಪ್‌ ಮೂಲಕ ಸಂಪರ್ಕ ಪಡೆಯಬಹುದು’ ಎಂದು ಬಿಎಸ್‌ಎನ್‌ಎಲ್‌ ಮೈಸೂರು ವೃತ್ತದ ಹಿರಿಯ ಪ್ರಧಾನ ವ್ಯವಸ್ಥಾಪಕ ರಾಜಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಇಂಟರ್‌ನೆಟ್‌ ಸಂಪರ್ಕವನ್ನು ಬಿಎಸ್‌ಎನ್‌ಎಲ್‌ ಮಂಡಳಿಯ ನಿರ್ದೇಶಕ ವಿವೇಕ್‌ ಬನ್ಜಾಲ್‌ ಮಂಗಳವಾರ ಉದ್ಘಾಟಿಸಲಿದ್ದಾರೆ. ಕರ್ನಾಟಕ ದೂರಸಂಪರ್ಕ ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕ ದೇವೇಶ್‌ ಕುಮಾರ್‌ ಅಧ್ಯಕ್ಷತೆ ವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT