ಶುಕ್ರವಾರ, ಮೇ 27, 2022
22 °C

ಹೊಳೆನರಸೀಪುರ: ಜಿಲೆಟಿನ್‌ ಸ್ಫೋಟಗೊಂಡು ಒಬ್ಬ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳೆನರಸೀಪುರ: ತಾಲ್ಲೂಕಿನ ಹಳೇಕೋಟೆ ಹೋಬಳಿಯ ಚಾಕೇನಹಳ್ಳಿ ಕಟ್ಟೆ ಗ್ರಾಮದ ಗೋದಾಮಿನಿಂದ ಭಾನುವಾರ ಸ್ಫೋಟಕ ಸಾಮಗ್ರಿ ಸಾಗಿಸುವ ವೇಳೆ ಜಿಲೆಟಿನ್‌ ಸ್ಫೋಟಗೊಂಡು ಒಬ್ಬರು ಮೃತಪಟ್ಟಿದ್ದಾರೆ. ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಶ್ರವಣಬೆಳಗೊಳ ಹೋಬಳಿಯ ಬೆಟ್ಟದಹಳ್ಳಿ ಗ್ರಾಮದ ಸಂಪತ್ (27) ಮೃತಪಟ್ಟವರು.

ಗಂಭೀರವಾಗಿ ಗಾಯಗೊಂಡಿರುವ ಚಾಕೇನಹಳ್ಳಿ ಗ್ರಾಮದ ನಟರಾಜ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಗಾಯಾಳು ರವಿಕುಮಾರ್‌ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು, ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಚಾಕೇನಹಳ್ಳಿಕಟ್ಟೆ ಗ್ರಾಮದ ನಾಗೇಶ್ ಎಂಬುವರು ಸ್ಫೋಟಕ ಸಾಮಗ್ರಿಗಳ ಸಂಗ್ರಹ ಮತ್ತು ಮಾರಾಟಕ್ಕೆ ಪರವಾನಗಿ ಪಡೆದಿದ್ದರು. ಇವರ ಬಳಿ ಸ್ಫೋಟಕ ಪಡೆದು ದ್ವಿಚಕ್ರ ವಾಹನದಲ್ಲಿ ಇಟ್ಟುಕೊಳ್ಳುವ ವೇಳೆ ಅವಘಢ ಸಂಭವಿಸಿದೆ. 

ಸ್ಫೋಟದ ತೀವ್ರತೆಗೆ ದೇಹಗಳು 300 ಮೀಟರ್‌ ದೂರದಲ್ಲಿ ಬಿದ್ದಿದ್ದವು. ಎರಡು ಬೈಕ್‌ಗಳು ಸುಟ್ಟು ಹೋಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು