ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ನೌಕರರ ವೈದ್ಯಕೀಯ ತಪಾಸಣೆ: ನಿಯಮ ತಿದ್ದುಪಡಿ

Last Updated 3 ಜನವರಿ 2021, 1:16 IST
ಅಕ್ಷರ ಗಾತ್ರ

ಬೆಂಗಳೂರು: 40 ವರ್ಷ ದಾಟಿದ ಸರ್ಕಾರಿ ನೌಕರರು ವರ್ಷಕ್ಕೊಮ್ಮೆ ವೈದ್ಯಕೀಯ ತಪಾಸಣೆಗೆ ಮಾಡಿಸಿಕೊಂಡು, ಅದರ ಮೊತ್ತ ಮರುಪಾವತಿಸಿಕೊಳ್ಳುವ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಸಂಬಂಧ, ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮ ತಿದ್ದುಪಡಿ ಮಾಡಿ, ಕರಡು ಅಧಿಸೂಚನೆ ಹೊರಡಿಸಲಾಗಿದೆ. ನಿಯಮ ತಿದ್ದುಪಡಿಗೆ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಒಳಗೆ ಕಾಲಾವಕಾಶ ನೀಡಲಾಗಿದೆ.

ತಿದ್ದುಪಡಿ ಪ್ರಕಾರ, ಪ್ರತಿ ಕ್ಯಾಲೆಂಡರ್‌ ವರ್ಷದಲ್ಲಿ ಒಂದು ಬಾರಿ ಮಾತ್ರ ನಿಗದಿಪಡಿಸಿದ ವೈದ್ಯಕೀಯ ತಪಾಸಣೆ ಮಾಡಿ ಹಣ ಮರುಪಾವತಿ ಮಾಡಿಕೊಳ್ಳಬಹುದು.ಹಿಮೋಗ್ಲೋಬಿನ್‌, ರಕ್ತದಲ್ಲಿರುವ ಸಕ್ಕರೆ ಅಂಶ, ಯಕೃತ್‌, ಕಿಡ್ನಿ, ಥೈರಾಯ್ಡ್‌, ಇಸಿಜಿ ತಪಾಸಣೆ ಮಾಡಿಸಿಕೊಳ್ಳಬಹುದು.

ಆದರೆ, ಈ ತಪಾಸಣೆಗಳನ್ನು ಸರ್ಕಾರಿ ಆಸ್ಪತ್ರೆಗಳ ಡಯೋಗ್ನಾಸ್ಟಿಕ್‌ ಸೆಂಟರ್‌ಗಳಲ್ಲಿ ಮಾಡಬೇಕು. ಅಲ್ಲಿ ಸೌಲಭ್ಯ ಇಲ್ಲದೇ ಇದ್ದರೆ ಮಾತ್ರ ಸರ್ಕಾರಿ ಆಸ್ಪತ್ರೆಯಿಂದ ಶಿಫಾರಸು ಮಾಡಿದರೆ, ಸರ್ಕಾರ ಮಾನ್ಯತೆ ನೀಡಿರುವ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಬಹುದು ಎಂಬುದು ಕರಡು ನಿಯಮದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT