ಗುರುವಾರ , ಮೇ 19, 2022
23 °C

1.14 ಲಕ್ಷ ಟನ್ ರಾಗಿ ಖರೀದಿಸಲು ಸರ್ಕಾರ ತೀರ್ಮಾನ: ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುವರಿಯಾಗಿ 1.14 ಲಕ್ಷ ಟನ್ ರಾಗಿ ಖರೀದಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಆರಂಭದಲ್ಲಿ 2.1 ಲಕ್ಷ ಟನ್ ರಾಗಿ ಖರೀದಿಸಲಾಗಿತ್ತು. ಇನ್ನೂ ಕೆಲವು ಜಿಲ್ಲೆಗಳ ರೈತರಿಂದ ಹೆಚ್ಚುವರಿ ರಾಗಿ ಖರೀದಿಗೆ ಬೇಡಿಕೆ ಬಂದಿತ್ತು ಎಂದು ಹೇಳಿದರು.

1.14 ಲಕ್ಷ ಟನ್ ರಾಗಿ ಖರೀದಿಗೆ ₹482 ಕೋಟಿ ಬೇಕಾಗುತ್ತದೆ ಎಂದೂ ಬೊಮ್ಮಾಯಿ ತಿಳಿಸಿದರು.

ತನಿಖೆಗೆ ಸಿದ್ಧ: ಮಠದ ಕೆಲಸಕ್ಕೂ ಶೇ 40 ರಷ್ಟು ಕಮಿಷನ್ ಕೊಡಬೇಕು ಎಂದು ದಿಂಗಾಲೇಶ್ವರ ಸ್ವಾಮೀಜಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಸ್ವಾಮೀಜಿ ಯಾರಿಗೆ, ಯಾವಾಗ ಮತ್ತು ಯಾವ ಕಾರಣಕ್ಕೆ ಕಮಿಷನ್ ಕೊಟ್ಟಿದ್ದಾರೆ ಎಂಬ ವಿವರ ನೀಡಿದರೆ ತನಿಖೆ ನಡೆಸುವುದಾಗಿ ತಿಳಿಸಿದರು.

ದಿಂಗಾಲೇಶ್ವರರು ಮಹಾತ್ಮರು, ಮಹಾನ್ ತಪಸ್ವಿಗಳು ಹೀಗಾಗಿ ಅವರು ಕಮಿಷನ್ ನೀಡಿದ ಸಂಪೂರ್ಣ ವಿವರ ನೀಡಲಿ. ಆಳವಾದ ತನಿಖೆ ನಡೆಸುತ್ತೇವೆ ಎಂದು ಬೊಮ್ಮಾಯಿ ವ್ಯಂಗ್ಯವಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು