ಸೋಮವಾರ, ಆಗಸ್ಟ್ 15, 2022
27 °C

ಬಡವರ ಮುಗಿಸಲು ಹೊರಟ ಬಿಜೆಪಿ: ಅಗತ್ಯ ಆಹಾರಗಳ ಮೇಲೆ ಜಿಎಸ್‌ಟಿಗೆ ಕಾಂಗ್ರೆಸ್ ಖಂಡನೆ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಗತ್ಯ ಆಹಾರಗಳ ಮೇಲೆ ಜಿಎಸ್‌ಟಿ ಹೇರಲು ಹೊರಟಿರುವ ಬಿಜೆಪಿ ಸರ್ಕಾರ ಬಡ, ಮಧ್ಯಮ ವರ್ಗ, ಹಾಗೂ ರೈತರನ್ನು ಮುಗಿಸಲು ಹೊರಟಿದೆ ಎಂದು ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ. 

ಈ ಕುರಿತು ‘ಪ್ರಜಾವಾಣಿ’ ವರದಿಯನ್ನು ಟ್ವೀಟ್‌ ಮಾಡಿರುವ ಕೆಪಿಸಿಸಿ,‘ಇದು ಕೇಂದ್ರ ಬಿಜೆಪಿ ಸರ್ಕಾರದ ಮತ್ತೊಂದು ಮಾಸ್ಟರ್ ಸ್ಟ್ರೋಕ್’ ಎಂದು ವ್ಯಂಗ್ಯವಾಡಿದೆ.

‘ಮಾಂಸ, ಮೊಸರು, ತುಪ್ಪ, ಗೋಧಿ ಹಿಟ್ಟು ಮುಂತಾದ ಅಗತ್ಯ ಆಹಾರಗಳ ಜೊತೆಗೆ ಸಾವಯವ ಗೊಬ್ಬರದ ಮೇಲೂ ಶೇ 5 ಜಿಎಸ್‌ಟಿ ಹೇರಲಾಗಿದೆ. ಬೆಲೆ ಏರಿಕೆಯಿಂದ ಬಸವಳಿದಿರುವ ಬಡ, ಮಧ್ಯಮ ವರ್ಗ, ರೈತರನ್ನು ಮುಗಿಸಲು ಮೋದಿ ಸರ್ಕಾರ ಹೊರಟಿದೆ’ ಎಂದು ಆರೋಪಿಸಿದೆ. 

‘ಅಚ್ಛೇದಿನ್ ಹೆಸರಲ್ಲಿ ಬಡಜನರ ಬದುಕನ್ನು ಬಿಜೆಪಿ ಬರ್ಬರವಾಗಿಸಿದೆ’ ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು