ಭಾರತೀಯ ಕೋಸ್ಟ್ ಗಾರ್ಡ್‌ಗೆ ಎಎಲ್‌ಎಚ್ ಮಾರ್ಕ್–3 ಹೆಲಿಕಾಪ್ಟರ್ ಸೇರ್ಪಡೆ

ಬೆಂಗಳೂರು: ಎಚ್‌ಎಎಲ್ ಭಾರತೀಯ ಕಡಲು ರಕ್ಷಣಾ ಪಡೆಗೆ (ಇಂಡಿಯನ್ ಕೋಸ್ಟ್ ಗಾರ್ಡ್) 16 ಎಎಲ್‌ಎಚ್ (ಎಂಕೆ3) ಹೆಲಿಕಾಪ್ಟರ್‌ಗಳ ಪೂರೈಕೆ ಸರಣಿಯ ಕೊನೆಯ ಹೆಲಿಕಾಪ್ಟರ್ ಅನ್ನು ಮಂಗಳವಾರ ಹಸ್ತಾಂತರಿಸಿತು.
ಬೆಂಗಳೂರಿನಲ್ಲಿ ನಡೆದ ಹಸ್ತಾಂತರ ಕಾರ್ಯಕ್ರಮದಲ್ಲಿ ಕೋಸ್ಟ್ ಗಾರ್ಡ್‌ನ ವ್ಯವಸ್ಥಾಪಕ ನಿರ್ದೇಶಕ ವಿ.ಎಸ್.ಪಥಾನಿಯಾ, ಕೋಸ್ಟ್ ಗಾರ್ಡ್ ಮತ್ತು ಎಚ್‌ಎಎಲ್‌ನ ಹಿರಿಯ ಅಧಿಕಾರಿಗಳು ಇದ್ದರು.
ಸುಧಾರಿತ ಹಗುರ ಹೆಲಿಕಾಪ್ಟರ್ (ಎಎಲ್ಎಚ್) ಎಂಕೆ 3 ಅನ್ನು ಎಚ್‌ಎಎಲ್ ದೇಶೀಯವಾಗಿಯೇ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದೆ. ಕಂಪನಿಯು ಈವರೆಗೆ ಒಟ್ಟು 330 ಎಎಲ್‌ಎಚ್ ಹೆಲಿಕಾಪ್ಟರ್‌ಗಳನ್ನು ತಯಾರಿಸಿದೆ. ಬಹು ಉದ್ದೇಶದ ಈ ಹೆಲಿಕಾಪ್ಟರ್ ಈವರೆಗೆ 3.74 ಲಕ್ಷ ಗಂಟೆಗಳಷ್ಟು ಹಾರಾಟ ನಡೆಸಿದೆ. 16 ಹೆಲಿಕಾಪ್ಟರ್‌ಗಳ ಪೂರೈಕೆಗೆ 2017 ರಲ್ಲಿಯೇ ಒಪ್ಪಂದ ಆಗಿತ್ತು ಎಂದು ಎಚ್‌ಎಎಲ್ ಹೇಳಿದೆ.
ಈ ಸಂದರ್ಭದಲ್ಲಿ ಮಾತನಾಡಿದ ವಿ.ಎಸ್.ಪಥಾನಿಯಾ ಅವರು, ಎಚ್‌ಎಎಲ್ ಜತೆ ಸಹಯೋಗ ಹೆಮ್ಮೆಯ ವಿಷಯವಾಗಿದೆ. ಇನ್ನೂ ಒಂಬತ್ತು ಹೆಲಿಕಾಪ್ಟರ್‌ಗಳ ಖರೀದಿಗೆ ಆಶಯ ಪತ್ರವನ್ನು ನೀಡಲಾಗಿದೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲೂ ಅತಿ ಕಡಿಮೆ ಅವಧಿಯಲ್ಲಿ ಹೆಲಿಕಾಪ್ಟರ್‌ಗಳನ್ನು ತಯಾರಿಸಿ ಕೊಟ್ಟಿದ್ದರಿಂದ ದೇಶದ ಸಮುದ್ರ ತೀರದ ರಕ್ಷಣೆಯನ್ನು ಬಲಪಡಿಸಲು ಸಾಧ್ಯವಾಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಚ್‌ಎಎಲ್‌ನ ವ್ಯವಸ್ಥಾಪಕ ನಿರ್ದೇಶಕ ಸಿ.ಬಿ.ಅನಂತಕೃಷ್ಣನ್, ಹೆಲಿಕಾಪ್ಟರ್ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಅನ್ಬುವೇಲನ್ ಅವರು ಮಾತನಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.