ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಗುಡಿಯ ಒತ್ತಡದಿಂದ ಮತಾಂತರ ನಿಷೇಧ: ಎಚ್.ಡಿ. ಕುಮಾರಸ್ವಾಮಿ

Last Updated 22 ಡಿಸೆಂಬರ್ 2021, 19:52 IST
ಅಕ್ಷರ ಗಾತ್ರ

ಬೆಳಗಾವಿ: ‘ರಿಮೋಟ್‌ ಕಂಟ್ರೋಲ್‌ನಂತೆ ಬಿಜೆಪಿಯನ್ನು ನಿಯಂತ್ರಿಸುವ ಗರ್ಭಗುಡಿಯ ಸಂಘಟನೆಗಳ ಒತ್ತಡದಿಂದ ರಾಜ್ಯ ಸರ್ಕಾರ ಮತಾಂತರ ನಿಷೇಧ ಮಸೂದೆ ಮಂಡಿಸಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈ ಮಸೂದೆಯನ್ನು ಬಿಜೆಪಿ ಮೇಲೆ ಹಿಡಿತವುಳ್ಳ ಸಂಘಟನೆಗಳ ನಾಯಕರನ್ನು ಖುಷಿಪಡಿಸಲು ತರಲಾಗಿದೆ. ಇದರಲ್ಲಿ ಜನರ ಹಿತ ರಕ್ಷಿಸುವ ಉದ್ದೇಶವೂ ಇಲ್ಲ’ ಎಂದರು.

‘ತರಾತುರಿಯಲ್ಲಿ ಏಕೆ ಮಂಡಿಸಿದ್ದಾರೆ? ಜನವರಿಯಲ್ಲಿ ನಡೆಯುವ ಅಧಿವೇಶನದಲ್ಲಿ ಮಂಡಿಸಲು ಅವಕಾಶವಿತ್ತು. ಮತಾಂತರ ನಿಷೇಧ ಮಸೂದೆಯನ್ನು ಜೆಡಿಎಸ್‌ ವಿರೋಧಿಸಲಿದೆ. ಇದರಲ್ಲಿ ಯಾವುದೇ ರಾಜಿ ಇಲ್ಲ’ ಎಂದರು.

ಈ ಹಿಂದೆ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿತು. ಅದರಿಂದ ಜನರಿಗೆ ಏನು ಅನುಕೂಲವಾಗಿದೆ? ಗೋಶಾಲೆಗಳನ್ನು ಎಲ್ಲಿ ತೆರೆದಿದ್ದಾರೆ? ಗೋವುಗಳನ್ನು ಸಾಕುವ ರೈತರ ಬದುಕು ಏನಾಗಿದೆ? ಗೋರಕ್ಷಣೆಯ ಹೆಸರಿನಲ್ಲಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ದೂರಿದರು.

‘ಸಿದ್ದರಾಮಯ್ಯ ಗೊಬೆಲ್‌ ಇದ್ದಂತೆ’
‘ಹಿಟ್ಲರ್‌ ಆಸ್ಥಾನದಲ್ಲಿ ಸುಳ್ಳು ಹೇಳುವುದನ್ನೇ ಕಾಯಕ ಮಾಡಿಕೊಂಡಿದ್ದ ಗೊಬೆಲ್‌ನಂತೆಯೇ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

ಸರಣಿ ಟ್ವೀಟ್‌ ಮಾಡಿರುವ ಅವರು, ‘ಜೆಡಿಎಸ್‌ ಜಟ್ಟಿಗಳನ್ನು ಸೃಷ್ಟಿಸುವ ಪಕ್ಷ. ಜಟ್ಟಿಗಳನ್ನು ಎಗರಿಸಿಕೊಂಡು ಹೋಗುವ ‘ಬ್ರೋಕರಪ್ಪ’ನ ಕುತಂತ್ರಕ್ಕೆ ಹೆದರುವ ಪ್ರಶ್ನೆಯೇ ಇಲ್ಲ. ಹಿಂದೆ ದೇವರಾಜ ಅರಸು ಅವರಿಗೆ ನರಕಯಾತನೆ ನೀಡಿದ್ದ ಕಾಂಗ್ರೆಸ್‌, ಈಗ ‘ಅಭಿನವ ಅರಸು’ ಎಂಬ ಪುಂಗಿ ಬಿಡುವ ‘ಸುಳ್ಳು ಸಿದ್ದಪ್ಪ’ನಿಗೆ ಶರಣಾಗಿದೆ‘ ಎಂದು ಹೇಳಿದರು.

ಜೆಡಿಎಸ್‌ ಮುಳುಗುವ ಪಕ್ಷವಾ? ತೇಲುವ ಪಕ್ಷವಾ? ಎಂಬುದನ್ನು 2023ರ ವಿಧಾನಸಭೆ ಚುನಾವಣೆಯಲ್ಲಿ ಜನರೇ ತೋರಿಸುತ್ತಾರೆ. ಅಲ್ಲಿಯವರೆಗೆ ಸಿದ್ಧಸೂತ್ರಧಾರನ ‘ಆಪರೇಷನ್‌ ಹಸ್ತವೆಂಬ ಅಸಹ್ಯ’ ನಡೆಯಲಿ. ಜೆಡಿಎಸ್‌ ಜಗ್ಗುವುದಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT