ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯರಿಂದ ಕಾಂಗ್ರೆಸ್ ಸರ್ವನಾಶ: ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ

Last Updated 5 ಅಕ್ಟೋಬರ್ 2020, 18:51 IST
ಅಕ್ಷರ ಗಾತ್ರ

ಬೆಂಗಳೂರು: ‘ಯಾವ ಪಕ್ಷದಿಂದ ಬೆಳೆದರೊ, ಈಗ ಅದೇ ಪಕ್ಷದ ಸರ್ವನಾಶದ ಬಗ್ಗೆ ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಂದಲೇ ಕಾಂಗ್ರೆಸ್‌ ಸರ್ವನಾಶ ಆಗಲಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

‘ಜೆಡಿಎಸ್‌ ಪಕ್ಷವೇ ಅಲ್ಲ’ ಎಂಬ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ದೇಶದಲ್ಲಿ ಅಧಿಕಾರಕ್ಕೆ ಬರಲು ಯಾವ ಯಾವ ಪಕ್ಷಗಳ ಹೆಗಲು ಪಡೆದಿದ್ದೀರಿ. ಕರ್ನಾಟಕದಲ್ಲಿ ನಾನು ಯಾವತ್ತೂ ಯಾವುದೇ ಪಕ್ಷಕ್ಕೆ ಹೆಗಲು ಕೊಡಲು ಹೋಗಿಲ್ಲ. ಕಳೆದ ಚುನಾವಣೆಯಲ್ಲಿ ಅಡ್ಡಪಲ್ಲಕಿ ತಂದವರು ನೀವು. ನಾವು ಅಂದು ನಿಮ್ಮ ಅಡ್ಡಪಲ್ಲಕಿ ಬೇಡ. ನಿಮ್ಮ ಅಡ್ಡಪಲ್ಲಕಿ ನಾವೇ ಹೊರುತ್ತೇವೆ ಎಂದು‌ ಹೇಳಿದೆವು. ಕೊನೆಗೆ, ನೀವೇ ಕುಳಿತುಕೊಳ್ಳಿ ಎಂದು ಅರ್ಧ ದಾರಿಯಲ್ಲಿ ಬೀದಿಗೆ ಬೀಳಿಸಿ ಹೋಗಿ
ದ್ದೀರಿ. ಜೆಡಿಎಸ್‌ ಬಗ್ಗೆ ಹಗುರವಾಗಿ ಮಾತನಾಡಬೇಡಿ’ ಎಂದರು.

‘ಶಿರಾ ಕ್ಷೇತ್ರದಲ್ಲಿ ನಾನು ಕಣ್ಣೀರು ಸುರಿಸಿಲ್ಲ. ಹಳ್ಳಿ ಭಾಷೆಯಲ್ಲಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಹೇಳಿದ್ದೇನೆ. ನಾನು ಮಾಡಿರುವ ಒಳ್ಳೆ ಕೆಲಸಕ್ಕೆ ಹಾಲು ಕೊಡುತ್ತೀರೊ, ವಿಷ ಕೊಡುತ್ತೀರೊ ನಿರ್ಧರಿಸಿ ಎಂದಿದ್ದೇನೆ’ ಎಂದರು.

‘ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅನ್ನು ‘ಬಿ’ ಟೀಮ್‌ ಎಂದು ಕರೆದಿರಿ. ಈಗ ಮತ್ತೆ ಅದೇ ಕೆಲಸ ಮಾಡುತ್ತಿದ್ದೀರಿ. ರಾಜೇಶ್ ಗೌಡ ಮತ್ತು ನಿಮ್ಮ ಪುತ್ರ ಯತೀಂದ್ರ ಇಬ್ಬರೂ ಬ್ಯುಜಿನೆಸ್‌ ಪಾಲುದಾರರಲ್ಲವೇ. ರಾಜೇಶ್ ಗೌಡ ನಿಮ್ಮ ಚಿತಾವಣೆಯಿಂದಲೇ ಬಿಜೆಪಿಗೆ ಹೋಗಿದ್ದಾನೆ. ಬಿಜೆಪಿಯ ಗೆಲುವಿಗೆ ಒಳ ಸಂಚು ಮಾಡಿರುವುದು ನೀವು. ಕಳೆದ ಚುನಾವಣೆಯಲ್ಲಿ ‘ಬಿ’ ಟೀಮ್ ಎಂದು ಮುಸ್ಲಿಂ ಮತ ವರ್ಗೀಕರಣ ಮಾಡಿದಿರಿ. ಈಗಲೂ ನೀವು ಅದೇ ಕೆಲಸ ಮಾಡಲು ಹೊರಟಿದ್ದೀರಿ. ನಾನು ಎಂದೂ ಜಾತಿ ರಾಜಕಾರಣ ಮಾಡಿಲ್ಲ. ನೀವು ಚಿಲ್ಲರೆ ರಾಜಕಾರಣ ಬಿಟ್ಟು ನೇರ ರಾಜಕಾರಣ ಮಾಡಿ’ ಎಂದೂ ಕುಮಾರಸ್ವಾಮಿ ಕುಟುಕಿದ್ದಾರೆ.

‘ಗೌಡರ ಹೆಗಲ ಮೇಲೆ ಕುಳಿತು ಡಿಸಿಎಂ ಆಗಿದ್ದರು’

ಹಾಸನ: ‘ತಾವು ಉಪಮುಖ್ಯಮಂತ್ರಿಯಾಗಿದ್ದು ಎಚ್‌.ಡಿ.ದೇವೇಗೌಡರ ಹೆಗಲ ಮೇಲೆ ಕುಳಿತು ಎಂಬುದನ್ನುಸಿದ್ದರಾಮಯ್ಯ ನೆನಪು ಮಾಡಿಕೊಳ್ಳಬೇಕು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಹೇಳಿದರು.

‘ಜೆಡಿಎಸ್‌ ಒಂದು ರಾಜಕೀಯ ಪಕ್ಷವೇ ಅಲ್ಲ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ಇಂಥ ಲಘುವಾದ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು.ಸಮ್ಮಿಶ್ರ ಸರ್ಕಾರ ನಡೆಸಲು, ಜೆಡಿಎಸ್‌ ಯಾರ ಬಳಿಯೂ ಹೋಗಿರಲಿಲ್ಲ. ಕಾಂಗ್ರೆಸ್‌ನವರೇ ನಮ್ಮ ಬಳಿ ಬಂದಿದ್ದರು. ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರೂ ಅಧಿಕಾರ ನಡೆಸಿದ್ದು ಕಾಂಗ್ರೆಸ್‌. ನಾವು ಅವರ ಹೆಗಲ ಮೇಲೆ ಕುಳಿತು ಅಧಿಕಾರ ಮಾಡಿಲ್ಲ. ಅವರೇ ನಮ್ಮ ಹೆಗಲ ಮೇಲೆ ಕುಳಿತು ಅಧಿಕಾರ ಮಾಡಿದರು’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ
ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT