ಮಂಗಳವಾರ, ಮಾರ್ಚ್ 28, 2023
33 °C

ರಾಜ್ಯದಲ್ಲೇ ಒಳ್ಳೆಯ ಮಾದರಿಗಳಿವೆ: ಎಚ್‌ಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಜ್ಯದಲ್ಲೆ ಧೋಲೇರಾ ಗಿಫ್ಟ್‌ ಸಿಟಿಯ ಮಾದರಿಗಳು ಬೇಕಿಲ್ಲ. ರಾಜ್ಯದಲ್ಲೇ ಒಳ್ಳೆಯ ಮಾದರಿಗಳಿವೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಸಚಿವ ಶೆಟ್ಟರ್‌ ನೇತೃತ್ವದ ತಂಡದ ಪ್ರವಾಸದ ಕುರಿತು ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘ಯಾವುದೋ ರಾಜ್ಯದ ಮಾದರಿಗಳ ಹೆಸರಿನಲ್ಲಿ ಅಲ್ಲಿಗೆ ಹೋಗಿ ನಮ್ಮ ರಾಜ್ಯದ ಗೌರವ ಹಾಳು ಮಾಡಬೇಡಿ ಎಂದು ಸಚಿವರಲ್ಲಿ ಮನವಿ ಮಾಡಿದೆ. ಇಲ್ಲಿರುವ ತಜ್ಞರನ್ನೇ ಬಳಸಿಕೊಂಡು ಕೆಲಸ ಮಾಡಿ’ ಎಂದರು.

ಓದಿ: ಸಚಿವ ಶೆಟ್ಟರ್‌ ನೇತೃತ್ವದ ತಂಡದಿಂದ ಗುಜರಾತ್ ಪ್ರವಾಸ

ಧೋಲೇರಾ ‘ಗಿಫ್ಟ್‌ ಸಿಟಿ’ ನಿರ್ಮಾಣದ ತ್ರೀ–ಡಿ ಚಿತ್ರಣವನ್ನು 2008ರಲ್ಲಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಈಗಿನ ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದರು. ಅಲ್ಲಿ ಈವರೆಗೂ ಯಾವ ಅಭಿವೃದ್ಧಿಯೂ ಆಗಿಲ್ಲ. ಅಲ್ಲಿ ಹೋಗಿ ಗುಜರಾತ್‌ ಮಾದರಿ ನೋಡಿಕೊಂಡು ಬಂದು, ಇಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಕರ್ನಾಟಕಕ್ಕೆ ಬಂದಿಲ್ಲ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು