ಮಂಗಳವಾರ, ಮಾರ್ಚ್ 28, 2023
32 °C

ನಮಗೆ ಇರುವುದೊಂದೇ ಭೂಮಿ, ಜನಸಂಖ್ಯಾ ಸ್ಫೋಟ ನಿಲ್ಲಿಸೋಣ: ಸುಧಾಕರ್‌ ಮನವಿ

ಪ್ರಜಾವಾಣಿ ವೆಬ್‌ ಡೆಸ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಿತಿಮೀರಿ ಏರಿಕೆಯಾಗುತ್ತಿರುವ ಜಾಗತಿಕ ಜನಸಂಖ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ಭಾನುವಾರ ಟ್ವೀಟ್‌ ಮಾಡಿದ್ದಾರೆ.

'ಮೊದಲ ನೂರು ಕೋಟಿ ತಲುಪಲು ಸಾವಿರಾರು ವರ್ಷ ಬೇಕಾಯಿತು! ನೂರರಿಂದ 700 ಕೋಟಿ ತಲುಪಲು ಕೇವಲ 200 ವರ್ಷಗಳು ಬೇಕಾಯಿತು! ನಮಗೆ ಇರುವುದೊಂದೇ ಭೂಮಿ, ನಿಯಂತ್ರಣವಿಲ್ಲದ ಜನಸಂಖ್ಯಾ ಸ್ಫೋಟ ನಿಲ್ಲಿಸೋಣ' ಎಂದು ಮನವಿ ಮಾಡಿದ್ದಾರೆ.

ಜುಲೈ 11ರಂದು ವಿಶ್ವ ಜನಸಂಖ್ಯಾ ದಿನ ಎಂದು ಆಚರಿಸಲಾಗುತ್ತದೆ. ಪ್ರಪಂಚದ ಒಟ್ಟು ಜನಸಂಖ್ಯೆಯು 800 ಕೋಟಿಯತ್ತ ಸಾಗಿದೆ. ಚೀನಾ ಹಾಗೂ ಭಾರತದಲ್ಲಿ ಕ್ರಮವಾಗಿ 140 ಕೋಟಿ ಮತ್ತು 130 ಕೋಟಿಗಿಂತ ಹೆಚ್ಚು ಜನಸಂಖ್ಯೆ ಇದ್ದು, ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ಮೊದಲೆರೆಡು ಸ್ಥಾನಗಳಲ್ಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು