ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗೆ ಹತ್ತಿ ಬೆಳೆ ಜಲಾವೃತ

Last Updated 15 ಜೂನ್ 2022, 20:00 IST
ಅಕ್ಷರ ಗಾತ್ರ

ಹಾಸನ/ಕೊಡಗು:ಹಾಸನ ಜಿಲ್ಲೆಯ ಹಳೇಬೀಡು ಹೊರವಲಯದ ಹಳ್ಳಿಗಳಲ್ಲಿ ಮಂಗಳವಾರ ರಾತ್ರಿ ಧಾರಾಕಾರ ಮಳೆ ಸುರಿದಿದ್ದು, ಹತ್ತಿ, ಜೋಳ, ಸೂರ್ಯಕಾಂತಿ ಬೆಳೆಗೆ ಹಾನಿಯಾಗಿದೆ. ಜಿ.ಸಾಣೇನಹಳ್ಳಿಯಲ್ಲಿ 20 ಎಕರೆ ಹತ್ತಿ ಬೆಳೆ ನೀರಿನಲ್ಲಿ ಮುಳುಗಿದೆ. 1 ಅಡಿ ಎತ್ತರ ಬೆಳೆದಿದ್ದ ಹತ್ತಿ ಗಿಡಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಗ್ರಾಮದ ಹಳ್ಳ ತುಂಬಿ ಹರಿಯುತ್ತಿದ್ದು, ಕೆರೆಯಲ್ಲಿ ಎರಡು ಅಡಿ ನೀರು ಏರಿಕೆಯಾಗಿದೆ.

ಹಾಸನದಲ್ಲಿ ಬುಧವಾರ ಮಧ್ಯಾಹ್ನ ಆರಂಭವಾದ ಮಳೆ, ಸಂಜೆಯವರೆಗೆ ಸುರಿಯಿತು. ಹಿರೀಸಾವೆ, ಚನ್ನರಾಯಪಟ್ಟಣ, ನುಗ್ಗೇಹಳ್ಳಿಯಲ್ಲಿ ಹದವಾದ ಮಳೆಯಾಯಿತು.

ಮಡಿಕೇರಿ ನಗರದಲ್ಲಿ ಬುಧವಾರ ಮಧ್ಯಾಹ್ನ 15 ನಿಮಿಷ ಉತ್ತಮ ಮಳೆ ಸುರಿಯಿತು. ಬಳಿಕ, ತುಂತುರು ಮಳೆಯಾಗಿದೆ.

ಹುಬ್ಬಳ್ಳಿಯಲ್ಲಿ ತಂಪೆರೆದ ಮಳೆ

ಹುಬ್ಬಳ್ಳಿ: ನಗರದ ವಿವಿಧೆಡೆ ಬುಧವಾರ ಮಧ್ಯಾಹ್ನ ಸಾಧಾರಣ ಮಳೆ ಸುರಿಯಿತು. ಬೆಳಿಗ್ಗೆಯಿಂದ ಇದ್ದ ಮೋಡ ಕವಿದ ವಾತಾವರಣ ಮಧ್ಯಾಹ್ನ ಬದಲಾಗಿ, ಬಿಸಿಲಿನ ಝಳ ಹೆಚ್ಚಾಯಿತು.

ನಂತರ ಬಿಸಿಲಿನ ಅಬ್ಬರ ತಗ್ಗಿ, ಮಧ್ಯಾಹ್ನ 3ರ ಹೊತ್ತಿಗೆ ಸುಮಾರು ಹತ್ತು ನಿಮಿಷ ಮಳೆ ಸುರಿಯಿತು. ಏಕಾಏಕಿ ಸುರಿದ ಮಳೆಯಿಂದಾಗಿ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT