ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಮಪೂಜ್ಯ ಹೆಡಗೇವಾರ್‌’: ಎಸ್‌.ಎಲ್. ಭೈರಪ್ಪ ಪ್ರತಿಪಾದನೆ

ಚರಿತ್ರೆ ಓದದ ಸಾಹಿತಿಗಳು ಚಳವಳಿಯನ್ನೇ ಮಾಡಿಕೊಂಡಿರಬೇಕಾಗುತ್ತದೆ
Last Updated 4 ಜೂನ್ 2022, 20:16 IST
ಅಕ್ಷರ ಗಾತ್ರ

ಮೈಸೂರು: ‘ಪರಮಪೂಜ್ಯ ಹೆಡಗೇವಾರ್‌ ಅವರ ಭಾಷಣದಲ್ಲಿ ಏನು ಪ್ರಸ್ತುತತೆ ಇದೆ? ಅದನ್ನು ತೆಗೆದು ಬಿಡಿ ಎಂಬ ಆಗ್ರಹ ಎದ್ದಿದೆ. ಅದನ್ನು ತೆಗೆದು ಹಾಕುವುದು, ಇಟ್ಟುಕೊಳ್ಳುವುದು ಮುಖ್ಯವಲ್ಲ. ಅವರು ಏನು ಮಾಡಿದ್ದಾರೆ ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ, ಪ್ರೊ.ನಂ.ವೆಂಕೋಬರಾಯರಂಥವರು ಕಣ್ಮುಂದೆ ಇದ್ದಾರೆ’ ಎಂದು ಕಾದಂಬರಿಕಾರ ಎಸ್‌.ಎಲ್‌.ಭೈರಪ್ಪ ಇಲ್ಲಿ ಪ್ರತಿಪಾದಿಸಿದರು.

ಶನಿವಾರ ವೆಂಕೋಬರಾವ್‌ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಈ ತಪ್ಪು, ಆ ತಪ್ಪು ಮಾಡಿದ್ದಾರೆ ಎಂದು ಇವತ್ತು ಏನು ಗದ್ದಲಗಳು ನಡೆಯುತ್ತಿವೆ, ಆ ಎಲ್ಲ ಗದ್ದಲಗಳಿಗೂ ಮೋದಿ, ವೆಂಕೋಬರಾಯರಂಥವರಲ್ಲಿ ಉತ್ತರ ಸಿಗುತ್ತದೆ. ಚರಿತ್ರೆಯನ್ನು ಓದದೇ ಬಾಯಿಗೆ ಬಂದಂತೆ ಮಾತಾಡುವ ಸಾಹಿತಿಗಳು ಚಳವಳಿಗಳನ್ನು ಮಾಡಿಕೊಂಡೇ ಇರಬೇಕಾಗುತ್ತದೆ’ ಎಂದರು.

‘ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ವಿವಿಧ ಹಂತಗಳಲ್ಲಿ ಕೆಲಸ ಮಾಡುತ್ತಿರುವವರು ನಿಜವಾದ ಸೇವಕರೇ ಹೊರತು, ಯಾವ ಅಧಿಕಾರವನ್ನೂ ಬಯಸಿದವರಲ್ಲ.
ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಸಂಸತ್ತಿನ ಹೊಸ್ತಿಲಿಗೆ ತಲೆ ಮುಟ್ಟಿಸಿ ನಮಸ್ಕರಿಸಿದ್ದರು. ಅದುವರೆಗೆ ಯಾವ ಪ್ರಧಾನಿಯೂ ಆ ಕೆಲಸ ಮಾಡಿರಲಿಲ್ಲ. ಪ್ರಧಾನಿಯಾಗುವ ಹಲವು ವರ್ಷಗಳ ಮುನ್ನ ಅಹಮದಾಬಾದ್‌ ರೈಲಿನ ಹವಾನಿಯಂತ್ರಿತ ಕೋಚ್‌ನಲ್ಲಿ ಐಆರ್‌ಎಸ್‌ ಮಹಿಳಾ ಅಧಿಕಾರಿಗಳಿಗೆ ಸ್ಥಳ ಬಿಟ್ಟು ಕೊಟ್ಟು ಮೋದಿ ನೆಲದ ಮೇಲೆ ಮಲಗಿದ್ದರು. ಅವರಲ್ಲಿ ಅಂಥ ಗುಣ, ಮನೋಧರ್ಮ ರೂಪಿಸಿದವರು ಹೆಡಗೇವಾರ್‌’ ಎಂದರು.

‘ಸರ್ಜಿಕಲ್‌ ಸ್ಟ್ರೈಕ್‌ ಮುಗಿ ಯುವವರೆಗೂ ಮೋದಿ ರಾತ್ರಿಯಿಡೀ ನಿದ್ದೆ ಮಾಡಿರಲಿಲ್ಲ. ಆದರೆ ನೆಹರೂ ಚೀನಾ ಯುದ್ಧದ ಸಂದರ್ಭದಲ್ಲಿ ಚೆನ್ನಾಗಿ ನಿದ್ದೆ ಮಾಡಿದ್ದರು. ಈ ಇಬ್ಬರ ನಡುವಿನ ವೈರುಧ್ಯವನ್ನು ಎಲ್ಲರೂ ಅರಿಯಬೇಕು’ ಎಂದು ಪ್ರತಿಪಾದಿಸಿದರು.

‘ದೇಶದ ಪ್ರತಿಯೊಬ್ಬರಲ್ಲೂ ಕೆಲವು ಮೂಲಭೂತವಾದ ಗುಣಗಳಿರಬೇಕು. ಆರ್‌ಎಸ್‌ಎಸ್‌ನ ಬಹಳಷ್ಟು
ಸ್ವಯಂಸೇವಕರಿಗೆ ಇಂಥ ಗುಣಗಳು ಮೈಗೂಡಿರಲು ಹೆಡಗೇವಾರ್ ಕಾರಣ, ಅಂಥವರನ್ನು ರೂಪಿಸುವುದೇ ಇಂದು ಬಹಳ ಮುಖ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT