ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

83 ಕೈದಿಗಳಿಗೆ ಕೋವಿಡ್‌

ಹೈಕೋರ್ಟ್‌ಗೆ ಸರ್ಕಾರ ಮಾಹಿತಿ
Last Updated 27 ಸೆಪ್ಟೆಂಬರ್ 2020, 3:22 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ 47 ಕಾರಾಗೃಹಗಳಲ್ಲಿನ ಒಟ್ಟು 83 ಕೈದಿಗಳಲ್ಲಿ ಸದ್ಯ ಕೊರೊನಾ ಸೋಂಕಿದ್ದು, ಎಲ್ಲರಿಗೂ ಕೋವಿಡ್ ಆಸ್ಪತ್ರೆ ಮತ್ತು ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಕೋವಿಡ್ ಹರಡದಂತೆ ಕೈಗೊಂಡಿರುವ ಕ್ರಮಗಳ ಕುರಿತು ವಿವರವಾದ ವರದಿ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ನಿರ್ದೇಶನ ನೀಡಿದೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಅಮೋಲ್ ಕಾಳೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ಪೀಠ ವಿಚಾರಣೆ ನಡೆಸುತ್ತಿದೆ. ‘ಕೋವಿಡ್ ದೃಢಪಟ್ಟಿದ್ದ 668 ಕೈದಿಗಳಲ್ಲಿ 585 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ’ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ವಿಕ್ರಮ್ ಹುಯಿಲಗೋಳಮಾಹಿತಿ ನೀಡಿದ್ದಾರೆ.

‘ಕಾರಾಗೃಹಗಳಲ್ಲಿ ಐಸೊಲೇಷನ್ ವಾರ್ಡ್ ಸಿದ್ಧಪಡಿಸಲಾಗಿದೆ. ಆದರೂ, ಸೋಂಕಿತರನ್ನು ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿಚಾರಣಾಧೀನ ಕೈದಿಗಳನ್ನು ಕಾರಾಗೃಹಗಳಿಗೆ ಕರೆತರುವ ಮುನ್ನ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಸೋಂಕಿಲ್ಲದವರನ್ನು ಮಾತ್ರ ದಾಖಲಿಸಿಕೊಳ್ಳಲಾಗುತ್ತಿದೆ.ಮಾರ್ಚ್ 23ರಂದು ಜೈಲುಗಳ ಸಾಮರ್ಥ್ಯಕ್ಕೆ ಹೋಲಿಸಿದರೆ ಶೇ 110 ಇದ್ದ ಕೈದಿಗಳ ಸಂಖ್ಯೆಯನ್ನು ಈಗ ಶೇ 97.7ಕ್ಕೆ ಇಳಿಸಲಾಗಿದೆ’ ಎಂದು ವಿವರಿಸಿದ್ದಾರೆ.

ದೊಡ್ಡ ನಗರಗಳಲ್ಲಿನ ಕಾರಾಗೃಹಗಳಲ್ಲೇ ಹೆಚ್ಚಿನದಾಗಿ ಕೋವಿಡ್ ಪ್ರಕರಣ ದಾಖಲಾಗುತ್ತಿವೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ 5,203 ಕೈದಿಗಳಿದ್ದು, ಅವರಲ್ಲಿ 320 ಜನರಿಗೆ ಸೋಂಕು ತಗಲಿತ್ತು. ಇನ್ನೂ 17 ಜನರಲ್ಲಿ ಸೋಂಕು ಸಕ್ರಿಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಸೂರು ಜೈಲಿನಲ್ಲಿ 64, ಕಲಬುರ್ಗಿಯಲ್ಲಿ 43, ಬೆಳಗಾವಿಯಲ್ಲಿ 37, ಬಳ್ಳಾರಿಯಲ್ಲಿ 29 ಮತ್ತು ವಿಜಯಪುರದಲ್ಲಿ 19 ಕೈದಿಗಳಿಗೆ ಸೋಂಕು ತಗುಲಿತ್ತು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT