ಶನಿವಾರ, ಸೆಪ್ಟೆಂಬರ್ 19, 2020
22 °C
ಪ್ರಮಾಣ ಪತ್ರ ಸಲ್ಲಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶನ

ಮಾಸ್ಕ್, ಸ್ಯಾನಿಟೈಸರ್ ಅಗತ್ಯ ವಸ್ತುಗಳೇ: ಹೈಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಿಸೈನರ್ ಮಾಸ್ಕ್‌ ಧರಿಸಿರುವ ಯುವತಿ

ಬೆಂಗಳೂರು: ಎನ್–95 ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳನ್ನು ಅಗತ್ಯ ವಸ್ತುಗಳು ಎಂದು ಪರಿಗಣಿಸಲಾಗಿದೆಯೇ ಎಂಬುದರ ಕುರಿತು ಪ್ರಮಾಣಪತ್ರ ಸಲ್ಲಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಮಾಸ್ಕ್ ಮತ್ತು ಸ್ಯಾನಿಟೈಸರ್ ಖರೀದಿ ಕುರಿತ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ಪೀಠ, ‘ಎನ್–95 ಮಾಸ್ಕ್ ಅನ್ನು ಕಾಲಕಾಲಕ್ಕೆ ಯಾವ ದರದಲ್ಲಿ ಖರೀದಿಸಲಾಗಿದೆ’ ಎಂಬುದರ ಕುರಿತು ವಿವರ ಒದಗಿಸುವಂತೆ ಆದೇಶಿಸಿದೆ.

‘ಕೇಂದ್ರ ಸರ್ಕಾರವು ಮಾರ್ಚ್ 13ರಂದು ಆದೇಶ ಹೊರಡಿಸಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಅಗತ್ಯ ವಸ್ತುಗಳು ಎಂದು ಹೇಳಿತ್ತು. ಆದರೆ, ಜೂನ್ 30ರ ನಂತರ ಈ ಪಟ್ಟಿಯಿಂದ ಇವುಗಳನ್ನು ಕೈಬಿಡಲಾಗಿದೆ. ಇದರ ಹಿಂದೆ ‘ಮಹತ್ವದ’ ಬೆಳವಣಿಗೆಗಳು ಆಗಿರಬಹುದು’ ಎಂದು ಪೀಠ ಅಭಿಪ್ರಾಯಪಟ್ಟಿದೆ.

‘ಮಾರುಕಟ್ಟೆಯ ಬೇಡಿಕೆ ಮತ್ತು ಪೂರೈಕೆ ಆಧರಿಸಿ ದರ ನಿಗದಿಪಡಿಸುವ ಅಧಿಕಾರವನ್ನು ರಾಷ್ಟ್ರೀಯ ಔಷಧ ದರ ಪ್ರಾಧಿಕಾರಕ್ಕೆ ಬಿಡಲಾಗಿತ್ತು. ಎನ್–95 ಮಾಸ್ಕ್ ಅಲಭ್ಯತೆ ಕುರಿತು ಯಾವುದೇ ದೂರುಗಳ ಬಂದಿಲ್ಲ’ ಎಂದು ಕೇಂದ್ರ ಸರ್ಕಾರದ ಪರ ವಕೀಲರು ಮಾಹಿತಿ ನೀಡಿದರು.

‘ಮಾರುಕಟ್ಟೆಯಲ್ಲಿ ಎನ್‌–95 ಮಾಸ್ಕ್ ಮತ್ತು ಸ್ಯಾನಿಟೈಸರ್ ಸುಲಭವಾಗಿ ಲಭ್ಯವಾಗುತ್ತಿದೆಯೆ, ಇಲ್ಲವೋ ಮತ್ತು ದರದಲ್ಲಿ ವ್ಯತ್ಯಾಸಗಳು ಇವೆಯೇ ಎಂಬುದರ ಬಗ್ಗೆಯೂ ರಾಜ್ಯ ಸರ್ಕಾರ ವಿವರ ಒದಗಿಸಬೇಕು. ಎಲ್ಲಾ ವಿವರಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆ.17ರೊಳಗೆ ಸಲ್ಲಿಸಬೇಕು’ ಎಂದು ಪೀಠ ತಿಳಿಸಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು