ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆಗಳ ದತ್ತು ಸ್ವೀಕಾರಕ್ಕೆ ಹೈಕೋರ್ಟ್‌ ಅಸ್ತು

Last Updated 13 ಜೂನ್ 2022, 20:05 IST
ಅಕ್ಷರ ಗಾತ್ರ

ಬೆಂಗಳೂರು: ‘ಖಾಸಗಿಯವರಮಾಲೀಕತ್ವದಲ್ಲಿರುವ ಆನೆಗಳನ್ನು ವಾಣಿಜ್ಯ ಉದ್ದೇಶ ಹೊಂದಿರದ ಚಟುವಟಿಕೆಗಳಿಗೆ ಬಳಸುವುದಕ್ಕಾಗಿದತ್ತು ಪಡೆಯಲು ಯಾವುದೇ ನಿರ್ಬಂಧವಿಲ್ಲ’ ಎಂದು ಹೈಕೋರ್ಟ್ ಆದೇಶಿಸಿದೆ.

ಗುಜರಾತ್‌ನ ಜಾಮ್‌ ನಗರದ ರಾಧಾ ಕೃಷ್ಣ ದೇವಾಲಯ ಕಲ್ಯಾಣ ಟ್ರಸ್ಟ್‌ಗೆ ಕರ್ನಾಟಕದಿಂದ ನಾಲ್ಕು ಆನೆಗಳನ್ನು ದತ್ತು ನೀಡಿರುವುದನ್ನು ಪ್ರಶ್ನಿಸಿ ಎಂ.ಎಸ್. ಮುರಳಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ಮತ್ತು ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಟ್ರಸ್ಟ್ ಪರ ವಕೀಲರು ಪ್ರಮಾಣ ಪತ್ರ ಸಲ್ಲಿಸಿ, ‘ಪ್ರಾಣಿಗಳ ಕಲ್ಯಾಣದ ಉದ್ದೇಶ ದಿಂದಲೇ ಟ್ರಸ್ಟ್ ರಚಿಸಲಾಗಿದೆ. ಆನೆ ಗಳನ್ನು ಉತ್ತಮ ರೀತಿಯಲ್ಲಿ ಆರೈಕೆ ಮಾಡಲಾಗುತ್ತಿದೆ. ದೇವಾಲಯದ ಆವರಣದಲ್ಲಿನ ಧಾರ್ಮಿಕ ವಿಧಿ ವಿಧಾನ ಗಳಿಗೆ ಮಾತ್ರ ಬಳಕೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಇದನ್ನು ಮಾನ್ಯ ಮಾಡಿದ ನ್ಯಾಯ ಪೀಠ, ‘ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ಕಲಂ 49ರಡಿ ವಾಣಿಜ್ಯ ಉದ್ದೇಶಗಳನ್ನು ಹೊರತುಪಡಿಸಿ ಉಳಿದ ಸ್ವರೂಪದ ಚಟುವಟಕೆಗಳಿಗೆ ಜೀವಂತ ಆನೆಗಳನ್ನು ದತ್ತು ಪಡೆಯುವುದಕ್ಕೆ ಯಾವುದೇ ನಿರ್ಬಂಧ ಇಲ್ಲ. ಟ್ರಸ್ಟ್ ಆನೆಗಳನ್ನು ಉತ್ತಮ ರೀತಿಯಲ್ಲಿ ಆರೈಕೆ ಮಾಡುತ್ತಿರುವ ಕಾರಣ ಅವುಗಳನ್ನು ದತ್ತು ಪಡೆದಿರುವ ಬಗ್ಗೆ ಅಧಿಕೃತ ದಾಖಲೆ ಹೊಂದಿರಬೇಕಾದ ಅಗತ್ಯ ಇಲ್ಲ’ ಎಂಬ ಕಾರಣ ನೀಡಿ ಅರ್ಜಿ ವಜಾಗೊಳಿಸಿದೆ.

‘ಖಾಸಗಿ ವ್ಯಕ್ತಿಗಳ ಬಳಿ ಇರುವ ಆನೆಗಳನ್ನು ಸರ್ಕಾರ ತನ್ನ ವಶಕ್ಕೆ ತೆಗೆದು ಕೊಂಡು ಅವುಗಳನ್ನು ನಿರ್ವಹಣೆ ಮಾಡುವಂತೆ ನಿರ್ದೇಶಿಸಬೇಕು’ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT