ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗೆ ತಯಾರಿ: ಗೃಹ ಸಚಿವ ಅಮಿತ್ ಶಾ 3 ದಿನ ರಾಜ್ಯ ಪ್ರವಾಸ

Last Updated 27 ಡಿಸೆಂಬರ್ 2022, 15:58 IST
ಅಕ್ಷರ ಗಾತ್ರ

ಬೆಳಗಾವಿ: ಇದೇ (ಡಿಸೆಂಬರ್‌) 29 ರಿಂದ ಮೂರು ದಿನ ರಾಜ್ಯ ಪ್ರವಾಸ ಕೈಗೊಳ್ಳಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿಧಾನಸಭೆ ಚುನಾವಣೆ ತಂತ್ರಗಾರಿಕೆಯ ಮೊದಲ ಹಂತದ ತಾಲೀಮು ನಡೆಸಲಿದ್ದಾರೆ.

ಸಹಕಾರಿಗಳು, ಪಕ್ಷದ ನಾಯಕರು, ಬೂತ್‌ ಮಟ್ಟದ ಅಧ್ಯಕ್ಷರು ಮತ್ತು ಏಜೆಂಟರ ಜತೆ ನಡೆಯಲಿರುವ ಪ್ರತ್ಯೇಕ ಸಭೆ, ಸಮಾವೇಶಗಳಲ್ಲಿ ಅವರು ಭಾಗಿಯಾಗಲಿದ್ದಾರೆ.

29ರ ಗುರುವಾರ ರಾತ್ರಿ ಬೆಂಗಳೂರಿಗೆ ಬರಲಿರುವ ಶಾ ಅವರು ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮರುದಿನ ಬೆಳಿಗ್ಗೆ 10ರಿಂದ 12.15ರವರೆಗೆ ಅವರ ಸಮಯ ಕಾದಿರಿಸಲಾಗಿದೆ. ರಾಜ್ಯದ ಹಿರಿಯ ನಾಯಕರು, ಚುನಾವಣೆಯನ್ನು ಮುನ್ನಡೆಸುವ ಪ್ರಮುಖರು ಹಾಗೂ ಹಿರಿಯ ಸಚಿವರ ಜತೆ ರಹಸ್ಯ ಸಮಾಲೋಚನೆ ನಡೆಸಲಿದ್ದಾರೆ ಎಂದು ಗೊತ್ತಾಗಿದೆ.

ಮಧ್ಯಾಹ್ನ ಊಟದ ಬಳಿಕ ಮಂಡ್ಯಕ್ಕೆ ತೆರಳಿರುವ ಅವರು, ಅಲ್ಲಿನ ಸರ್ಕಾರಿ ಬಾಲಕರ ಕಾಲೇಜಿನ ಮೈದಾನದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳವರು. ಅಲ್ಲದೇ, ಗೆಜ್ಜಲಗೆರೆಯ ಡೇರಿ ಕಾಂಪ್ಲೆಕ್ಸ್‌ ಉದ್ಘಾಟಿಸಲಿದ್ದಾರೆ.

ಸಂಜೆ 5.45ಕ್ಕೆ ಬೆಂಗಳೂರಿಗೆ ವಾಪಸ್ ಆಗಲಿರುವ ಅವರು, ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿರುವ ಸಹಕಾರಿಗಳ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಅದೇ ದಿನ ತಾಜ್ ವೆಸ್ಟ್‌ ಎಂಡ್‌ನಲ್ಲಿ ರಾತ್ರಿ 8ರಿಂದ 9.30ರವರೆಗೆ ಪಕ್ಷದ ಸಭೆ ನಡೆಯಲಿದ್ದು, ಚುನಾವಣೆ ಸಿದ್ಧತೆ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ.

31ರ ಶನಿವಾರದಂದು ಬೆಳಿಗ್ಗೆ ಅದೇ ಹೋಟೆಲ್‌ನಲ್ಲಿ ಪಕ್ಷದ ನಾಯಕರ ಜತೆ ಬೆಳಗಿನ ಉಪಾಹಾರ ಸೇವಿಸಲಿದ್ದಾರೆ.

11ಗಂಟೆಗೆ ದೇವನಹಳ್ಳಿ ತಾಲ್ಲೂಕಿನ ಆವತಿಯಲ್ಲಿ ನಡೆಯಲಿರುವ ಸೌಹಾರ್ದ ಸಹಕಾರಿ ಒಕ್ಕೂಟದ ಕಟ್ಟಡದ ಭೂಮಿ ಪೂಜೆಯನ್ನು ನೆರವೇರಿಸಲಿದ್ದಾರೆ.

ಮಧ್ಯಾಹ್ನ 3ಗಂಟೆಯಿಂದ 4.30ರವರೆಗೆ ಅರಮನೆ ಮೈದಾನದಲ್ಲಿ ನಡೆಯಲಿರುವ ಪಕ್ಷದ ಬೂತ್ ಮಟ್ಟದ ಅಧ್ಯಕ್ಷರು, ಬೂತ್ ಏಜೆಂಟರ ಸಭೆಯನ್ನು ನಡೆಸಿ, ಸಲಹೆ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT