ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಾಬ್ ವಿವಾದ: ಸಮವಸ್ತ್ರದ ಸುತ್ತೋಲೆಗೆ ನಾವು ಬದ್ಧ ಎಂದ ಗೃಹ ಸಚಿವ ಆರಗ

ಮಕ್ಕಳು ಅದನ್ನು ಪಾಲಿಸಬೇಕು –ಗೃಹ ಸಚಿವ ಆರಗ ಜ್ಞಾನೇಂದ್ರ
Last Updated 8 ಫೆಬ್ರುವರಿ 2022, 21:05 IST
ಅಕ್ಷರ ಗಾತ್ರ

ಬೆಂಗಳೂರು: ‘ಸಮವಸ್ತ್ರ ಬಗ್ಗೆ ಈಗಾಗಲೇ ಸುತ್ತೋಲೆ ಹೊರಡಿಸ ಲಾಗಿದೆ. ನಾವು ಅದಕ್ಕೆ ಬದ್ಧರಾಗಿದ್ದೇವೆ.ಮಕ್ಕಳು ಪಾಲಿಸಬೇಕು. ಸದ್ಯ ವಿವಾದ ಕೋರ್ಟ್‌ನಲ್ಲಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.

ಹಿಜಾಬ್‌ ವಿವಾದ ಕುರಿತಂತೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮತ್ತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿ ದರು.

‘ಕೋವಿಡ್‌ ಕಾರಣ 2 ವರ್ಷ ತರಗತಿ ಸರಿಯಾಗಿ ನಡೆದಿಲ್ಲ. ನಾವು ಭಾರತ ಮಾತೆಯ ಮಕ್ಕಳು ಎಂಬ ಭಾವನೆ ಶಾಲೆ, ಕಾಲೇಜುಗಳಿಂದ ಹೊರಡಬೇಕು. ಶಾಂತಿಯುತವಾಗಿ ಶಾಲೆಗೆ ಹೋಗಲು ಮಕ್ಕಳಿಗೆಪೋಷಕರೂ ಸೂಚಿಸಬೇಕು‘ ಎಂದು ಸಲಹೆ ನೀಡಿದರು.

‘ರಾಜ್ಯದಲ್ಲಿ ನಡೆದ ಘಟನೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಶಿವಮೊಗ್ಗದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಆರೇಳು ಜನರನ್ನು ವಶಕ್ಕೆ ಪಡೆಯಲಾಗಿದೆ. ಯಾರೋ ಹೊರ ಗಡೆಯಿಂದ ಕಲ್ಲು ಹೊಡೆದಿದ್ದಾರೆ. ಶಾಲೆ ಕಾಲೇಜು ಆವರಣದಲ್ಲಿ ಅಶಾಂತಿ ಸೃಷ್ಟಿ ಆಗಬಾರದೆಂದು ರಜೆ ಘೋಷಿಸಿದ್ದೇವೆ’ ಎಂದರು.

ಧ್ವಜಸ್ತಂಭದಲ್ಲಿ ಕೇಸರಿ ಧ್ವಜ ಕಟ್ಟಿದ ಬಗ್ಗೆ ಪ್ರತಿಕ್ರಿಯಿಸಿದ ಅವರು,‘ಡಿ.ಕೆ. ಶಿವಕುಮಾರ್‌ ಅಂಥವರು ಇಂಥ ವಿಷಯದಲ್ಲಿ ಸರಿಯಾಗಿ ತಿಳಿದುಕೊಂಡು ಮಾತನಾಡಬೇಕು. ಪ್ರಚೋದನಕಾರಿ ಹೇಳಿಕೆಯನ್ನು ನೀಡಬಾರದು. ಜಿಲ್ಲಾಧಿಕಾರಿ ಕಚೇರಿ, ಪಂಚಾಯಿತಿ ಕಚೇರಿ ಮುಂದೆ ಮಾತ್ರ ಧ್ವಜಸ್ತಂಭದಲ್ಲಿ‌ ಮಾತ್ರ ರಾಷ್ಟ್ರಧ್ವಜ ಹಾರಿಸುತ್ತಾರೆ. ಕಾಲೇಜು ಆವರಣದಲ್ಲಿದ್ದ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜ ಇರಲಿಲ್ಲ. ಆ ಕಂಬಕ್ಕೆ ಕೆಲವರು ಕೇಸರಿ ಬಾವುಟ ಕಟ್ಟಿದ್ದಾರೆ. ರಾಷ್ಟ್ರ ಧ್ವಜ ಇಳಿಸಿ‌ ಕಟ್ಟಿದ್ದಾರೆ ಎನ್ನುವುದು ತಪ್ಪು ಮಾಹಿತಿ’ ಎಂದರು.

ಡಾ.ಸಿ.ಎನ್‌. ಅಶ್ವತ್ಥನಾರಾಯಣ ಮಾತನಾಡಿ, ‘ಹಿಜಾಬ್‌ ವಿಷಯದಲ್ಲಿ ಸರ್ಕಾರ ಮೈ ಮರೆತಿಲ್ಲ. ಕೆಲವರು ಪೈಪೋಟಿಗೆ ನಿಂತ ಕಾರಣ ವಿವಾದ ಬೆಳೆ ದಿದೆ. ವಿವಾದ ವ್ಯಾಪಕವಾಗಿ ಹರಡುತ್ತಿ ರುವುದರಿಂದ ಅಹಿತಕರ ಘಟನೆ ನಡೆ ಯಬಾರದೆಂದು ರಜಾ ಘೋಷಿಸಿದ್ದೇವೆ. ಕೋರ್ಟ್ ಆದೇಶಕ್ಕೆ ನಾವು ಕೂಡಾ ಕಾಯುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT