ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಪ್‌ಕಾಮ್ಸ್‌: ಬಾಕ್ಸ್‌ಗಳಲ್ಲಿ ಮಾವು ಮಾರಾಟಕ್ಕೆ ಚಾಲನೆ

Last Updated 11 ಜೂನ್ 2021, 18:30 IST
ಅಕ್ಷರ ಗಾತ್ರ

ಬೆಂಗಳೂರು: ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣಾ ಸಂಘಕ್ಕೆ (ಹಾಪ್‍ಕಾಮ್ಸ್)ಬೆಳೆಗಾರರು ಕಳುಹಿಸುವ ಮಾವನ್ನು ನೈಸರ್ಗಿಕವಾಗಿ ಮಾಗಿಸಿ, ಸಂಸ್ಥೆಯ ಬಾಕ್ಸ್‌ಗಳಲ್ಲೇ ಸುರಕ್ಷಿತವಾಗಿ ಗ್ರಾಹಕರಿಗೆ ಪೂರೈಸುವ ವ್ಯವಸ್ಥೆಗೆ ಶುಕ್ರವಾರ ಚಾಲನೆ ನೀಡಲಾಯಿತು.

ಲಾಲ್‌ಬಾಗ್‌ ಬಳಿಯ ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿಹಾಪ್‌ಕಾಮ್ಸ್‌ (ಬೆಂಗಳೂರು) ಅಧ್ಯಕ್ಷ ಎನ್‌.ದೇವರಾಜು ಹಾಗೂ ನಿರ್ದೇಶಕರು ಸಾಂಕೇತಿಕವಾಗಿ ಬಾಕ್ಸ್‌ಗಳಲ್ಲಿಮಾವು ಮಾರಾಟಕ್ಕೆ ಚಾಲನೆ ನೀಡಿದರು.

‘ಈ ಹಿಂದೆ 25 ಕೆ.ಜಿ ಸಾಮರ್ಥ್ಯದ ಕ್ರೇಟ್‌ಗಳಲ್ಲಿಮಾವನ್ನು ಪೂರೈಸಲಾಗುತ್ತಿತ್ತು. ಹೆಚ್ಚು ತೂಕ ಇರುತ್ತಿದ್ದರಿಂದ ಮಾವಿನ ಸಾಗಾಟ ಹಾಗೂ ಸಂಗ್ರಹದ ವೇಳೆ ಭಾರಿ ಪ್ರಮಾಣದ ಹಣ್ಣು ಹಾಳಾಗುತ್ತಿತ್ತು. ಹಾಗಾಗಿ, ಸಂಸ್ಥೆಯ ಹೆಸರಿನಲ್ಲೇ 3 ಕೆ.ಜಿ ತೂಕದ ಬಾಕ್ಸ್‌ಗಳನ್ನು ಹೊರತರಲಾಗಿದೆ. ಇದರಲ್ಲಿ ಕಡಿಮೆ ಪ್ರಮಾಣದ ಮಾವನ್ನು ಇಡುವುದರಿಂದ ಹೆಚ್ಚು ಹಾಳಾಗುವುದಿಲ್ಲ. ಗ್ರಾಹಕರಿಗೂ ಹಣ್ಣು ತಾಜಾಸ್ಥಿತಿಯಲ್ಲಿ ಸಿಗಲಿದೆ’ ಎಂದು ಎನ್‌.ದೇವರಾಜು ತಿಳಿಸಿದರು.

‘ಸಂಸ್ಥೆಯು ರೈತರಿಂದ ಮಾವನ್ನು ಕಾಯಿಯ ಸ್ಥಿತಿಯಲ್ಲೇ ತರಿಸಿಕೊಳ್ಳುತ್ತಿದೆ. ಬಳಿಕ ಅದನ್ನು ನೈಸರ್ಗಿಕ ವಿಧಾನಗಳಲ್ಲಿ ಹಣ್ಣು ಮಾಡಲಾಗುವುದು. ಈಗ ಬಾಕ್ಸ್‌ಗಳಲ್ಲಿ ಇಟ್ಟು ಮಾರಾಟ ಮಾಡುವುದರಿಂದ ಗ್ರಾಹಕರಿಗೆ ಹಾಗೂ ಸಂಸ್ಥೆಗೂ ಅನುಕೂಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT