ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆಗೆ ಡಿಜಿಟಲ್‌ ಗ್ರಂಥಾಲಯ

ವಿಜಯನಗರ ವಾಸ್ತುಶಿಲ್ಪ ಮಾದರಿಯಲ್ಲಿ ಜಿ+2 ಕಟ್ಟಡ ನಿರ್ಮಾಣ
Last Updated 3 ಜೂನ್ 2022, 19:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಗರ ವಾಸಿಗಳ ಬಹುವರ್ಷಗಳ ಬೇಡಿಕೆಯಾಗಿದ್ದ ಡಿಜಿಟಲ್‌ ಗ್ರಂಥಾಲಯ ನಿರ್ಮಾಣದ ಕನಸು ನನಸಾಗುವ ಸಂದರ್ಭ ಕೊನೆಗೂ ಬಂದೊದಗಿದೆ.

ನಗರದ ಹೃದಯ ಭಾಗದ ಜಿಲ್ಲಾ ಕ್ರೀಡಾಂಗಣಕ್ಕೆ ಹೊಂದಿಕೊಂಡಂತಿರುವ ವಿಜಯನಗರ ಕಾಲೇಜಿನ ಎದುರಿಗಿರುವ ಸ್ಥಳದಲ್ಲಿ ಕಾಮಗಾರಿ ಆರಂಭಗೊಂಡಿದ್ದು, ಇನ್ನೊಂದು ವರ್ಷದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.

ಒಟ್ಟು ₹4 ಕೋಟಿ ವೆಚ್ಚದಲ್ಲಿ ಡಿಜಿಟಲ್‌ ಗ್ರಂಥಾಲಯ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಜಿ+2 ಮಾದರಿಯಲ್ಲಿ ಕಟ್ಟಡ ತಲೆ ಎತ್ತಲಿದೆ. ವಿಜಯನಗರ ವಾಸ್ತುಶಿಲ್ಪದ ಮಾದರಿಯಲ್ಲಿ ಕಟ್ಟಡ ವಿನ್ಯಾಸಗೊಳಿಸಲು ನಿರ್ಧರಿಸಲಾಗಿದೆ. ಇದರ ಮೂಲಕ ಹಂಪಿ ಹೆರಿಟೇಜ್‌ ಮಹತ್ವ ಸಾರಲು ಉದ್ದೇಶಿಸಲಾಗಿದೆ.

ಯುವಕರು, ಹಿರಿಯ ನಾಗರಿಕರು, ಮಹಿಳೆಯರಿಗೆ ದಿನಪತ್ರಿಕೆ, ವಾರ ಪತ್ರಿಕೆ ಓದಲು ಪ್ರತ್ಯೇಕ ವ್ಯವಸ್ಥೆ ಇರುತ್ತದೆ. ಸರ್ಕಾರದ ಯೋಜನೆಗಳು, ಪ್ರಮುಖ ಘಟನಾವಳಿಗಳ ಸಾಕ್ಷ್ಯಚಿತ್ರ ವೀಕ್ಷಣೆಗೆ ಡಿಜಿಟಲ್‌ ಪರದೆ ಹೊಂದಿರುವ ಒಂದು ಪ್ರತ್ಯೇಕ ಬ್ಲಾಕ್‌ ಇರಲಿದೆ. ಗೆಜೆಟಿಯರ್‌, ಸಾಹಿತ್ಯ, ವಿಜ್ಞಾನ, ರಂಗಭೂಮಿ ಸೇರಿದಂತೆ ಇತರೆ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳ ಓದಿಗೂ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.

ಕ್ರೀಡಾಂಗಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಶಾಲಾ, ಕಾಲೇಜುಗಳಿವೆ. ಹತ್ತಿರದಲ್ಲೇ ಬಸ್‌ ನಿಲ್ದಾಣವಿದ್ದು, ಜನ ಬಂದು ಹೋಗಲು ಅನುಕೂಲ ಇದೆ. ಹಿರಿಯ ನಾಗರಿಕರು ಕ್ರೀಡಾಂಗಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಾಯುವಿಹಾರಕ್ಕೆ ಬಂದು ಹೋಗುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಓಡಾಟ ಇರುವ ಪ್ರದೇಶ ಆಗಿರುವುದರಿಂದ ಡಿಜಿಟಲ್‌ ಗ್ರಂಥಾಲಯಕ್ಕೆ ಕ್ರೀಡಾಂಗಣಕ್ಕೆ ಹೊಂದಿಕೊಂಡಿರುವ ಜಾಗವನ್ನು ಆಯ್ಕೆ ಮಾಡಲಾಗಿದೆ. ಈ ಹಿಂದೆ ಟೌನ್‌ ರೀಡಿಂಗ್‌ ರೂಂನಲ್ಲಿ ಕಿರು ಗ್ರಂಥಾಲಯವಿತ್ತು. ಮಳೆ ಬಂದಾಗ ಬಹಳ ಸಮಸ್ಯೆ ಉಂಟಾಗುತ್ತಿತ್ತು. ಬಳಿಕ ಆ ಕಟ್ಟಡವನ್ನು ತೆರವುಗೊಳಿಸಲಾಗಿತ್ತು. ಓದುಗರಿಗೆ ಗ್ರಂಥಾಲಯದ ವ್ಯವಸ್ಥೆ ಇರಲಿಲ್ಲ. ಆದಷ್ಟು ಶೀಘ್ರ ಬೇರೆಡೆ ಗ್ರಂಥಾಲಯ ಆರಂಭಿಸಬೇಕೆಂಬ ಕೂಗು ಕೇಳಿ ಬಂದಿತ್ತು.

ವಿಜಯನಗರ ಜಿಲ್ಲೆ ಕೂಡ ಅಸ್ತಿತ್ವಕ್ಕೆ ಬಂದಿರುವುದರಿಂದ ಸುಸಜ್ಜಿತ ಗ್ರಂಥಾಲಯದ ಅಗತ್ಯ ಮನಗಂಡು ಅದರ ನಿರ್ಮಾಣಕ್ಕೆ ಚಾಲನೆ ಕೊಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT