ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಮನೆ ಗದ್ದಲ| 3 ಸಚಿವರು, ಶಾಸಕರ ವಿರುದ್ಧ ಕ್ರಮಕ್ಕೆ ಶಿಫಾರಸು

ಮೇಲ್ಮನೆ ಗದ್ದಲ l ಮಧ್ಯಂತರ ವರದಿ ಮಂಡನೆ
Last Updated 29 ಜನವರಿ 2021, 17:33 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ಡಿಸೆಂಬರ್‌ 15ರಂದು ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ, ಸಚಿವರಾದ ಜೆ.ಸಿ. ಮಾಧುಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ, ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ಸಭಾಪತಿ ಹುದ್ದೆಯ ನಿರೀಕ್ಷೆ ಯಲ್ಲಿರುವ ಜೆಡಿಎಸ್‌ನ ಬಸವರಾಜ ಹೊರಟ್ಟಿ ಸೇರಿದಂತೆ ಹಲವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮರಿತಿಬ್ಬೇಗೌಡ ನೇತೃತ್ವದ ಸದನ ಸಮಿತಿ ಶಿಫಾರಸು ಮಾಡಿದೆ.

ಮರಿತಿಬ್ಬೇಗೌಡ ನೇತೃತ್ವದಲ್ಲಿ ಬಿಜೆಪಿಯ ಎ.ಎಚ್‌. ವಿಶ್ವನಾಥ್‌, ಎಸ್‌.ವಿ. ಸಂಕನೂರ, ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್ ಮತ್ತು ಆರ್‌.ಬಿ. ತಿಮ್ಮಾಪೂರ ಅವರನ್ನೊಳಗೊಂಡ ಸದನ ಸಮಿತಿಯನ್ನು ಸಭಾಪತಿ ಕೆ.ಪ್ರತಾಪ ಚಂದ್ರ ಶೆಟ್ಟಿ ನೇಮಿಸಿದ್ದರು. ವಿಶ್ವನಾಥ್‌ ಮತ್ತು ಸಂಕನೂರ ಸಮಿತಿಯ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ, ದೂರ ಉಳಿದಿದ್ದರು. ಮೂವರು ಸದಸ್ಯರು ವಿಚಾರಣೆ ನಡೆಸಿದ್ದು, ಸಮಿತಿಯ ಮಧ್ಯಂತರ ವರದಿಯನ್ನು ಸದನದಲ್ಲಿ ಶುಕ್ರವಾರ ಮಂಡಿಸಲಾಯಿತು.

‘ಉಪ ಸಭಾಪತಿಯಾಗಿದ್ದ ಎಸ್‌.ಎಲ್‌. ಧರ್ಮೇಗೌಡ ಅವರು ಕಾನೂನು ಬಾಹಿರವಾಗಿ ಸಭಾಪತಿ ಪೀಠವನ್ನು ಏರಲು ಮಾಧುಸ್ವಾಮಿ ಮತ್ತು ಅಶ್ವತ್ಥನಾರಾಯಣ ಪ್ರಚೋದನೆ ನೀಡಿದ್ದಾರೆ. ಸಭಾ ನಾಯಕ ಶ್ರೀನಿವಾಸ ಪೂಜಾರಿ ಅವರು ಅರುಣ್‌ ಶಹಾಪುರ ಅವರಿಗೆ ಕೈ ಸನ್ನೆ ಮೂಲಕ ಪ್ರಚೋದಿಸಿರುವುದು ಮತ್ತು ಉಪ ಸಭಾಪತಿಯವರ ಸೂಚನೆ ಮೇರೆಗೆ ಸದನದಲ್ಲಿ ಮಾಹಿತಿಯನ್ನು ಮಂಡಿಸುತ್ತಿರುವುದು ವಿಡಿಯೊ ದೃಶ್ಯಾವಳಿ ಗಳಲ್ಲಿ ಕಂಡುಬಂದಿದೆ. ಈ ಮೂವರೂ ಸರ್ಕಾರದ ಯಾವುದೇ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವುದು ಸೂಕ್ತವಲ್ಲ’ ಎಂದು ಸದನ ಸಮಿತಿ ಹೇಳಿದೆ.

ಎಂ.ಕೆ. ಪ್ರಾಣೇಶ್, ವೈ.ಎ. ನಾರಾಯಣಸ್ವಾಮಿ ಮತ್ತು ಅರುಣ್‌ ಶಹಾಪುರ (ಬಿಜೆಪಿ) ಅವರು ಸಭಾಪತಿ ಯವರು ಸದನ ಪ್ರವೇಶಿಸದಂತೆ ಬಾಗಿಲಿಗೆ ಚಿಲಕ ಹಾಕಿರುವುದು ವಿಡಿಯೊ ದೃಶ್ಯಾವಳಿ ಹಾಗೂ ಮಾರ್ಷಲ್‌ ಸಿಬ್ಬಂದಿಯ ಹೇಳಿಕೆಯಿಂದ ದೃಢಪಟ್ಟಿದೆ. ಬಸವರಾಜ ಹೊರಟ್ಟಿ, ಕೆ.ಟಿ. ಶ್ರೀಕಂಠೇಗೌಡ ಮತ್ತು ಗೋವಿಂದರಾಜ್‌ (ಜೆಡಿಎಸ್‌) ಉಪ ಸಭಾಪತಿಯವರನ್ನು ನಿಯಮಬಾಹಿರವಾಗಿ ಸಭಾಪತಿಯವರ ಪೀಠದಲ್ಲಿ ಕೂರಿಸಿರು ವುದು ದೃಢಪಟ್ಟಿದೆ. ನಂತರದಲ್ಲಿ ಪಕ್ಕದಲ್ಲಿದ್ದವರಿಗೆ ಹಿಂದೆ ಸರಿಯುವಂತೆ ಹೊರಟ್ಟಿ ಅವರು ಕೈ ಸನ್ನೆ ಮಾಡು ತ್ತಿರುವುದೂ ದೃಶ್ಯಾವಳಿಯಲ್ಲಿದೆ. ಈ ಎಲ್ಲರನ್ನೂ ಮುಂದಿನ ಎರಡು ಅಧಿವೇಶನಗಳ ಅವಧಿಗೆ ಕಲಾಪದಲ್ಲಿ ಭಾಗವಹಿಸದಂತೆ ನಿರ್ಬಂಧಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಸಚಿವ ಶ್ರೀನಿವಾಸ ಪೂಜಾರಿ ಅವರಿಗೂ ಎರಡು ಅಧಿವೇಶನಗಳಿಗೆ ನಿರ್ಬಂಧ ಹೇರಬೇಕೆಂಬ ಶಿಫಾರಸು ವರದಿಯಲ್ಲಿದೆ.

ಉಪ ಸಭಾಪತಿಯವರು ಪೀಠ ದಿಂದ ಎದ್ದ ಕೂಡಲೆ ಚಂದ್ರಶೇಖರ್ ಬಿ. ಪಾಟೀಲ್‌ ಸಭಾಪತಿಯವರ ಪೀಠ ದಲ್ಲಿ ಆಸೀನರಾಗಿರುವುದು ಕಂಡುಬಂದಿದೆ. ಸದನದ ಬಾಗಿಲಿನ ಚಿಲಕ ತೆಗೆಯಲು ಮತ್ತು ಉಪ ಸಭಾಪತಿಯವರನ್ನು ಪೀಠದಿಂದ ಕೆಳಕ್ಕೆ ಎಳೆದು ತರುವುದರಲ್ಲಿ ನಜೀರ್‌ ಅಹ್ಮದ್, ವಿರೋಧ ಪಕ್ಷದ ಮುಖ್ಯ ಸಚೇತಕ ಎಂ. ನಾರಾಯಣ ಸ್ವಾಮಿ, ಶ್ರೀನಿವಾಸ ವಿ. ಮಾನೆ ಮತ್ತು ಪ್ರಕಾಶ್‌ ರಾಥೋಡ್‌ (ಕಾಂಗ್ರೆಸ್‌) ಭಾಗಿಯಾಗಿರುವುದು ದೃಢ ಪಟ್ಟಿದೆ. ಈ ಐವರನ್ನೂ ಮುಂದಿನ ಒಂದು ಅಧಿವೇಶನದ ಅವಧಿಗೆ ಕಲಾಪ
ದಲ್ಲಿ ಭಾಗವಹಿಸದಂತೆ ನಿರ್ಬಂಧಿಸ ಬೇಕು ಎಂದು ಶಿಫಾರಸು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT