ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಪಕ್ಷಗಳಿಂದ ನೋವು: ರಾಜೀನಾಮೆಗೆ ಮುಂದಾಗಿದ್ದು ನಿಜ–ಸಭಾಪತಿ ಬಸವರಾಜ ಹೊರಟ್ಟಿ

Last Updated 25 ಡಿಸೆಂಬರ್ 2021, 7:34 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಪರಿಷತ್‌ನಲ್ಲಿ ನಿನ್ನೆ ಪ್ರತಿಪಕ್ಷಗಳು ನಡೆದುಕೊಂಡ ರೀತಿ ನನಗೆ ನೋವುಂಟು ಮಾಡಿತು. ಹಾಗಾಗಿ, ರಾಜೀನಾಮೆಗೆ ಮುಂದಾದೆ. ಕಡೆಗೆ, ಪ್ರತಿಪಕ್ಷಗಳ ನಾಯಕರು ನನ್ನನ್ನು ಭೇಟಿ ಮಾಡಿ, ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಕೇಳಿದರು. ಹಾಗಾಗಿ, ಅವರ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ’ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಘಟನೆ ಕುರಿತು ಶನಿವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಸದನದಲ್ಲಿ ಮೂರು ಗಂಟೆಗೆ ಬೆಲ್ ಆಗಬೇಕಿತ್ತು. ಆದರೆ, ಮೂರೂವರೆಯಾದರೂ ಆಗಲಿಲ್ಲ. ನನಗೂ ಅತ್ತ ಲಕ್ಷ್ಯವಿರಲಿಲ್ಲ. ಮತಾಂತರ ನಿಷೇಧ ಮಸೂದೆಗೆ ಅವಕಾಶ ನೀಡಲು ಸಭಾಪತಿ ಈ ರೀತಿ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷದವರು ಮನಸ್ಸಿಗೆ ಬಂದಂತೆ ಕೂಗಾಡಿದರು’ ಎಂದರು.

ಉತ್ತಮ ಚರ್ಚೆ

‘ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಕುರಿತು ಈ ಬಾರಿ ಪರಿಷತ್‌ನಲ್ಲಿ ಉತ್ತಮ ಚರ್ಚೆ ನಡೆದಿದೆ. ಹನ್ನೊಂದುವರೆ ತಾಸು ಚರ್ಚೆ ನಡೆಸಲಾಗಿದೆ. ಮೂರು ತಾಸು ಉತ್ತರ ನೀಡಲಾಗಿದೆ. ದಕ್ಷಿಣ ಕರ್ನಾಟಕದವರೇ ಉತ್ತರ ಕರ್ನಾಟಕದ ಬಗ್ಗೆ ಹೆಚ್ಚು ಮಾತನಾಡಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT