ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಆಸ್ತಿ ಪತ್ತೆ ಪ್ರಕರಣ: ಇ.ಡಿ ವಿಚಾರಣೆಗೆ ಹಾಜರಾದ ಶಾಸಕ ಜಮೀರ್ ಅಹ್ಮದ್

Last Updated 1 ಅಕ್ಟೋಬರ್ 2021, 8:05 IST
ಅಕ್ಷರ ಗಾತ್ರ

ನವದೆಹಲಿ: ಅಕ್ರಮ ಆಸ್ತಿ ಹೊಂದಿರುವ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರು ಶುಕ್ರವಾರ ಜಾರಿ ನಿರ್ದೇಶನಾಲಯ (ಇ.ಡಿ)ದ ವಿಚಾರಣೆ ಎದುರಿಸಿದರು.

ಇಲ್ಲಿನ ಖಾನ್ ಮಾರುಕಟ್ಟೆ ಪ್ರದೇಶದಲ್ಲಿರುವ ಲೋಕನಾಯಕ ಕಟ್ಟಡದಲ್ಲಿನ ಇ.ಡಿ ಕಚೇರಿಗೆ ಬೆಳಿಗ್ಗೆ ಕೆಲವು ದಾಖಲೆಗಳೊಂದಿಗೆ ಹಾಜರಾದ ಜಮೀರ್, ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದರು.

‘ತನಿಖಾಧಿಕಾರಿಗಳ ಸೂಚನೆ ಮೇರೆಗೆ ಎರಡು ವಾರಗಳ ಹಿಂದೆ ಅಗತ್ಯ ದಾಖಲೆ ಸಲ್ಲಿಸಿದ್ದೆ. ನಾಲ್ಕೈದು ವಿಚಾರಗಳ ಬಗ್ಗೆ ಸ್ಪಷ್ಟನೆ ಕೇಳಿದ್ದು, ಸೂಕ್ತ‌ ಉತ್ತರ ನೀಡಿದ್ದೇನೆ’ ಎಂದು ವಿಚಾರಣೆ ನಂತರ‌ ಜಮೀರ್‌ ಸುದ್ದಿಗಾರರಿಗೆ ತಿಳಿಸಿದರು.

‘ಐಎಂಎ ವಂಚನೆ ಪ್ರಕರಣಕ್ಕೂ, ಈ ವಿಚಾರಣೆಗೂ ಸಂಬಂಧ ಇಲ್ಲ. ನನ್ನ ನಿವಾಸದ ಮೇಲೆ ನಡೆದ ದಾಳಿ, ಸಾರಿಗೆ ವ್ಯವಹಾರದ ಬಗ್ಗೆ ಮಾಹಿತಿ ಕೇಳಲಾಯಿತು. ಮನೆ ಕಟ್ಟಲು ಖರೀದಿಸಲಾದ ಭೂಮಿಯ ಬಗ್ಗೆಯೂ ಮಾಹಿತಿ ನೀಡಿದ್ದೇನೆ’ ಎಂದು ಅವರು ವಿವರಿಸಿದರು.

ವಿಚಾರಣೆಯ ಸಂಪೂರ್ಣ ವಿವರ ನೀಡಲು ಸಾದ್ಯವಿಲ್ಲ. ಮತ್ತೆ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸೂಚನೆ ನೀಡಿಲ್ಲ. ಅವಶ್ಯಕತೆ ಇದ್ದರೆ ಕರೆ‌ ಕಳುಹಿಸುವುದಾಗಿ ಅಥವಾ ದೂರವಾಣಿ ಮೂಲಕವೇ ಮಾಹಿತಿ ಪಡೆಯುವುದಾಗಿ ತಿಳಿಸಿದ್ದಾರೆ ಎಂದು ಹೇಳಿದ ಜಮೀರ್, ಇನ್ನೂ ನಾಲ್ಕು ದಿನ ದೆಹಲಿಯಲ್ಲೇ ಇರುವುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT