ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಗ್ನಿವೀರವಾಯು’ ತರಬೇತಿಗೆ ಎಟಿಎಸ್‌ ಸನ್ನದ್ಧ

2,850 ಅಭ್ಯರ್ಥಿಗಳಿಗೆ 6 ತಿಂಗಳ ಕಾಲ ತರಬೇತಿ, ಕೊರೊನಾ ಹರಡುವಿಕೆ ನಿಯಂತ್ರಣಕ್ಕೂ ಕ್ರಮ
Last Updated 26 ಡಿಸೆಂಬರ್ 2022, 6:33 IST
ಅಕ್ಷರ ಗಾತ್ರ

ಬೆಳಗಾವಿ: ‘ಅಗ್ನಿಪಥ’ ಯೋಜನೆಯಡಿ ಭಾರತೀಯ ವಾಯುಪಡೆಯಲ್ಲಿ ‘ಅಗ್ನಿವೀರವಾಯು’ ಹುದ್ದೆಗೆ ಆಯ್ಕೆಯಾದ ಮೊದಲ ತಂಡಕ್ಕೆ ತರಬೇತಿ ನೀಡಲು ಸಾಂಬ್ರಾದ ಏರ್‌ಮೆನ್‌ ತರಬೇತಿ ಶಾಲೆ (ಎಟಿಎಸ್‌) ಸನ್ನದ್ಧವಾಗಿದೆ.

‘ಅಗ್ನಿವೀರವಾಯು’ ಹುದ್ದೆಗೆ 7ಲಕ್ಷಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 2,850 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಅವರಿಗೆ ಡಿ.30 ರಿಂದ 6 ತಿಂಗಳು ತರಬೇತಿ ಪ್ರಕ್ರಿಯೆ ಆರಂಭವಾಗಲಿದೆ. ಭಾನುವಾರ ಬೆಳಿಗ್ಗೆ ಇಲ್ಲಿಗೆ ಬಂದಿಳಿದ ವಿವಿಧ ರಾಜ್ಯಗಳ 800 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡರು. 29ರ ವರೆಗೆ ಉಳಿದ ಅಭ್ಯರ್ಥಿಗಳು ಬರಲಿದ್ದಾರೆ.

6 ತಿಂಗಳ ನಂತರ ಮಹಿಳಾ ಅಭ್ಯರ್ಥಿಗಳಿಗೂ ಇದೇ ಮಾದರಿ ತರಬೇತಿ ಕೊಡಲು ಯೋಜಿಸಿದ್ದಾರೆ.

ಟ್ರೇಡ್‌ ಬೇಸ್ಡ್‌ ತರಬೇತಿ: ‘250 ಬೋಧಕರು ಜನರಲ್‌ ಸರ್ವೀಸ್‌ ನಾಲೆಡ್ಜ್‌ ಮತ್ತು ಟ್ರೇಡ್‌ ರಿಲೇಟೆಡ್‌ ತರಬೇತಿ ನೀಡಲಿದ್ದಾರೆ. ನಂತರ, 4 ವರ್ಷಗಳ ಸೇವೆಗೆ ಅಭ್ಯರ್ಥಿಗಳು ಹಾಜರಾಗಲಿದ್ದಾರೆ. ಆ ಪೈಕಿ ಉತ್ತಮ ಪ್ರದರ್ಶನ ತೋರಿದ ಶೇ 25 ಮಂದಿ ವಾಯುಪಡೆಯಲ್ಲೇ ಸೇವೆ ಮುಂದುವರಿಸಲಿದ್ದಾರೆ’ ಎಂದು ಏರ್‌ ಕಮೊಡೋರ್‌ ಎಸ್‌.ಶ್ರೀಧರ್‌ ಸುದ್ದಿಗಾರರಿಗೆ ತಿಳಿಸಿದರು.

*

ಸಾಂಬ್ರಾದ ಏರ್‌ಮೆನ್‌ ತರಬೇತಿ ಶಾಲೆ ‘ಅಗ್ನಿವೀರವಾಯು’ ಹುದ್ದೆಗೆ ಆಯ್ಕೆಯಾದವರಿಗೆ ತರಬೇತಿ ನೀಡುವ ದೇಶದ ಏಕೈಕ ಕೇಂದ್ರವಾಗಿದೆ
–ಎಸ್‌.ಶ್ರೀಧರ್‌, ಏರ್‌ ಕಮೊಡೋರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT