ಮಂಗಳವಾರ, ಮಾರ್ಚ್ 28, 2023
32 °C

ಖರ್ಗೆಯನ್ನು ಟಿಶ್ಯೂ ಪೇಪರ್‌ ಹಾಗೆ ಬಳಸಿ ಎಸೆದ ರಾಹುಲ್: ವಿಡಿಯೊ ಹಂಚಿಕೊಂಡ ಬಿಜೆಪಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನ್ನಡಿಗ, ಎಐಸಿಸಿ ಅಧಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಹುಲ್ ಗಾಂಧಿ ಅಗೌರವ ತೋರಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. 

ಈ ಕುರಿತು ವಿಡಿಯೊ ಸಮೇತ ಟ್ವೀಟ್ ಮಾಡಿರುವ ಬಿಜೆಪಿ, ‘ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಯುವರಾಜ ರಾಹುಲ್ ಗಾಂಧಿಗೆ ಎಷ್ಟು ಮಾತ್ರದ ಗೌರವ ಇದೆ ಎಂಬುದಕ್ಕೆ ಈ ವಿಡಿಯೊ ಕೈಗನ್ನಡಿ. ಹಿರಿಯ ಕನ್ನಡಿಗ ಖರ್ಗೆಯವರನ್ನು ಈ ರೀತಿ ಟಿಶ್ಯೂ ಪೇಪರ್‌ನ ಹಾಗೆ ಬಳಸಿ ಎಸೆಯುವ ಈ ಅಗೌರವದ ಧೋರಣೆಯನ್ನು ಸ್ವಾಭಿಮಾನಿ ಕನ್ನಡಿಗರು ಎಂದಿಗೂ ಮರೆಯುವುದಿಲ್ಲ’ ಎಂದು ಬರೆದುಕೊಂಡಿದೆ.

ಬಿಜೆಪಿ ಆರೋಪ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ‘ಸುಳ್ಳೇ ಬಿಜೆಪಿ ಮನೆದೇವ್ರು’ ಪದೇ ಪದೇ ಸಾಬೀತಾಗುತ್ತಿದೆ. ಗೌರವಿಸುವ ಕಾರಣದಿಂದಲೇ ರಾಹುಲ್‌ ಗಾಂಧಿಯವರು ಖರ್ಗೆ ಅವರನ್ನು ತಮ್ಮ ಕಾರಿನಲ್ಲಿ ಕರೆದೊಯ್ದರು. ಮೋದಿ ಬೆಂಗಳೂರಿಗೆ ಬಂದಿದ್ದಾಗ ಭೇಟಿಯಾಗಲು ತೆರಳಿದ್ದ ಬಿ.ಎಸ್‌.ಯಡಿಯೂರಪ್ಪ ಅವರ ಮುಖ ನೋಡದೆ ಅವಮಾನಿಸಿ ಹೊರಟು ಹೋದಂತಹ  ದುರಂಕಾರಕ್ಕೆ ಮೊದಲು ಮದ್ದು ಹುಡುಕಿಕೊಳ್ಳಿ’ ಎಂದು ತಿರುಗೇಟು ನೀಡಿದೆ. 

ವಿಡಿಯೊದಲ್ಲಿ ಏನಿದೆ? 
ಕಾರಿನಿಂದ ಕೆಳಗಿಳಿದು ಮುಂದೆ ಹೋಗುತ್ತಿರುವ ಮಲ್ಲಿಕಾರ್ಜುನ ಖರ್ಗೆ ಅವರ ಬೆನ್ನನ್ನು ಹಿಂದೆ ನಿಂತಿದ್ದ ರಾಹುಲ್ ಗಾಂಧಿ ಅವರು ಕೈಯಿಂದ ಮುಟ್ಟುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಆದರೆ, ರಾಹುಲ್ ಗಾಂಧಿ, ಖರ್ಗೆ ಅವರಿಗೆ ಏನನ್ನಾದರೂ ಅಂಟಿಸಿದರೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.

ಇವನ್ನೂ ಓದಿ... 

ಮೋದಿ ಅವರೇ, ಸುನೀಲಗೆ ಕೈ ಮುಗಿಯುವಿರಾ, ಕಾಲಿಗೆ ಬೀಳುವಿರಾ: ಕಾಂಗ್ರೆಸ್ ವ್ಯಂಗ್ಯ

ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಲ್ಲವೆಂದು ಮೊದಲೇ ಹೇಳಿದ್ದೆ: ಯಡಿಯೂರಪ್ಪ

ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸದಿದ್ದರೆ ನಿವೃತ್ತಿ: ಶಾಸಕ ಶ್ರೀನಿವಾಸಗೌಡ 

ವಿಧಾನಸಭೆ ಚುನಾವಣೆ | ಸಿದ್ದರಾಮಯ್ಯಗೆ ಅಲೆದಾಟ ತಪ್ಪಿದ್ದಲ್ಲ: ಬಸವರಾಜ ಬೊಮ್ಮಾಯಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು