ಶನಿವಾರ, ಸೆಪ್ಟೆಂಬರ್ 25, 2021
22 °C

31 ಇನ್‌ಸ್ಪೆಕ್ಟರ್‌ ಬಡ್ತಿಗೆ ಕ್ರಮ; ವರದಿ ಕೇಳಿದ ಎಡಿಜಿಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ 31 ಇನ್‌ಸ್ಪೆಕ್ಟರ್‌ಗಳಿಗೆ ಡಿವೈಎಸ್ಪಿ ಆಗಿ ಬಡ್ತಿ ನೀಡಲು ಪೊಲೀಸ್ ಸಿಬ್ಬಂದಿ ಮಂಡಳಿ ಕ್ರಮ ಕೈಗೊಂಡಿದ್ದು, ಅರ್ಹ ಇನ್‌ಸ್ಪೆಕ್ಟರ್‌ಗಳ ಸೇವಾ ವರದಿ ಸಲ್ಲಿಸುವಂತೆ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.

‘ಹೈದರಾಬಾದ್ ಕರ್ನಾಟಕೇತರ ವೃಂದದಲ್ಲಿ ಬಡ್ತಿ ನೀಡಲು 31 ಇನ್‌ಸ್ಪೆಕ್ಟರ್‌ಗಳು ಅರ್ಹರಾಗಿದ್ದಾರೆ. ಪಟ್ಟಿ ಸಿದ್ಧಪಡಿಸಲಾಗಿದೆ. ಅವರ ವಾರ್ಷಿಕ ಕಾರ್ಯನಿರ್ವಹಣಾ ವರದಿ ನೀಡಿ. ಅವರ ವಿರುದ್ಧ ಯಾವುದಾದರೂ ಇಲಾಖೆ ವಿಚಾರಣೆ ಅಥವಾ ಅಪರಾಧ ಪ್ರಕರಣಗಳು ದಾಖಲಾಗಿದ್ದರೆ ಹಾಗೂ ನ್ಯಾಯಾಲಯದ ನಡವಳಿಗಳು ಬಾಕಿ ಇದ್ದರೆ ತಿಳಿಸಿ. ಎಲ್ಲ ಮಾಹಿತಿಯುಳ್ಳ ವರದಿಯನ್ನು ಸಿದ್ಧಪಡಿಸಿ ಜುಲೈ 27ರ ಒಳಗಾಗಿ ಪೊಲೀಸ್ ಪ್ರಧಾನ ಕಚೇರಿಗೆ ಕಳುಹಿಸಿ’ ಎಂದು ಎಡಿಜಿಪಿ ಎಂ.ಎ. ಸಲೀಂ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ರಾಜ್ಯದ ಎಲ್ಲ ಕಮಿಷನರ್, ಐಜಿಪಿಗಳು ಹಾಗೂ ಜಿಲ್ಲಾ ಎಸ್ಪಿಗಳಿಗೆ ಪತ್ರ ಕಳುಹಿಸಲಾಗಿದೆ. ಅರ್ಹ ಇನ್‌ಸ್ಪೆಕ್ಟರ್‌ಗಳ ಪಟ್ಟಿಯನ್ನೂ ಲಗತ್ತಿಸಲಾಗಿದೆ.

ಪಟ್ಟಿಯಲ್ಲಿ ಹೆಸರಿರುವ ಇನ್‌ಸ್ಪೆಕ್ಟರ್‌ಗಳು: ಬಿ.ಎಂ. ಕನಕಲಕ್ಷ್ಮಿ, ಬಿ.ಕೆ. ಮಂಜಯ್ಯ, ರವಿ ನಾಯ್ಕ್, ಕುಮಾರಸ್ವಾಮಿ, ಎಚ್‌.ಟಿ. ಸುನೀಲ್‌ಕುಮಾರ್, ಎನ್‌. ಶ್ರೀಹರ್ಷ, ಜಯಪ್ಪ ನಾಮಗೌಡರ, ಬಿ. ಗಿರೀಶ್, ಪಿ.ಎಂ. ಯೋಗೇಂದ್ರಕುಮಾರ್, ಆನಂದ ಕಬ್ಬೂರಿ, ಎನ್‌. ತನ್ವೀರ್‌ ಅಹ್ಮದ್, ಕೆ.ಆರ್. ಚಂದ್ರಶೇಖರ್, ಎಸ್‌.ಆರ್‌.ಭರತ್, ಎಚ್‌.ಎಸ್‌. ರೇಣುಕಾರಾಧ್ಯ, ಮುತ್ತಣ್ಣ ಸವರಗೋಳ, ರವಿಕುಮಾರ್, ಬಿ. ಚೆಲುವರಾಜು, ಬಿ.ಎನ್. ಶ್ರೀನಿವಾಸ್, ಬಿ.ಕೆ. ಶೇಖರ್, ಎಸ್. ನಾಗರಾಜು, ಎಸ್‌.ಕೆ. ಮಾಲತೀಶಾ, ಪ್ರಭುಗೌಡ ಕಿರೆದಳ್ಳಿ, ಶಂಕರಗೌಡ ಪಾಟೀಲ, ಪಿ. ವೀರೇಂದ್ರಕುಮಾರ್, ಶಕುಂತಲ ಗೌಡರ, ಅಬ್ದುಲ್ ಕರೀಂ ರಾವುತಾರ್, ಶಿವಪ್ರಕಾಶ್ ರಾಜೇಂದ್ರ ನಾಯಕ್, ಚಿದಂಬರ ಮಡಿವಾಳರ, ಟಿ.ಆರ್. ರಾಜಾಶೆಟ್ಟಿ, ಎಂ.ಎನ್. ನಾಗರಾಜು, ಬಸವರಾಜ್ ತೇಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು