ಮಂಡ್ಯ: ‘ಎಂಟು ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಾಕಿಸ್ತಾನದಲ್ಲಿ ಇದೆಯಾ, ನಾನು ಬಿಜೆಪಿಗೆ ಬೆಂಬಲ ನೀಡಿದ ಮಾತ್ರಕ್ಕೆ ನನ್ನ ಸ್ವಾಭಿಮಾನ ಹೊರಟು ಹೋಗುತ್ತದೆಯೇ’ ಎಂದು ಸಂಸದೆ ಸುಮಲತಾ ಶುಕ್ರವಾರ ಪ್ರಶ್ನಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಕೆಲವರು ಅವರವರ ಅನುಕೂಲಕ್ಕೆ ಮಾತನಾಡುತ್ತಿದ್ದಾರೆ, ನನ್ನ ಬಗ್ಗೆ ಮಾತನಾಡಿದರೆ ಅವರಿಗೆ ಹೆಚ್ಚು ಪ್ರಚಾರ (ಮೈಲೇಜ್) ಸಿಗುತ್ತದೆ. ಮೊದಲು ಜೆಡಿಎಸ್‌ನವರು ನನ್ನ ಬಗ್ಗೆ ಮಾತನಾಡಿ ಮೈಲೇಜ್ ತೆಗೆದುಕೊಂಡರು. ಈಗ ಕಾಂಗ್ರೆಸ್ ಪಕ್ಷದ ಕೆಲವರು ಇದೇ ಹಾದಿಯಲ್ಲಿದ್ದಾರೆ, ಅವರಿಗೆ ಒಳ್ಳೆಯದಾಗಲಿ’ ಎಂದರು.
‘ನನ್ನ ಗೆಲ್ಲಿಸಲು 15 ಲಕ್ಷ ಜನರು ಶ್ರಮಪಟ್ಟಿದ್ದಾರೆ. ಯಾರೋ ಒಬ್ಬರು ನನ್ನಿಂದ ಎಂದು ಹೇಳುವುದು ಸರಿಯಲ್ಲ. ಅಭಿಮಾನಿಗಳು ನಮ್ಮನ್ನು ಇಷ್ಟಪಡುವುದು ಪಕ್ಷ ನೋಡಿ ಅಲ್ಲ. ನಾವು ಯಾವುದೇ ಪಕ್ಷ ಸೇರ್ಪಡೆಯಾದರೂ ಜನರು ಪ್ರೀತಿಸುತ್ತಾರೆ. ಎಲ್ಲದಕ್ಕೂ ರಾಜಕೀಯ ಬೆರೆಸುವುದು ಬೇಡ. ನಾಗಮಂಗಲದ ರಂಗಮಂದಿರದಲ್ಲಿ ನನ್ನ ಭಾವಚಿತ್ರ ತೆಗೆಸಿರುವುದು ಕೂಡ ರಾಜಕಾರಣವಾಗಿದೆ’ ಎಂದರು.
‘ವಿಧಾನಸಭಾ ಚುನಾವಣೆಯಲ್ಲಿ ನಾನು ಪ್ರಚಾರ ಮಾಡುವುದನ್ನು ಬಿಜೆಪಿ ಹೈಕಮಾಂಡ್ ನಿರ್ಧರಿಸುತ್ತದೆ, ಅದರ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಧರ್ಮೇಂದ್ರ ಪ್ರಧಾನ್ ಅವರು ಬಿಜೆಪಿ ಚುನಾವಣಾ ಉಸ್ತುವಾರಿಯಾಗಿದ್ದು ಅವರ ಸೂಚನೆಯಂತೆ ನಡೆಯುತ್ತೇನೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.