ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿಗೆ ಬರ್ತಾರಂತೆ ಎಚ್‌ಡಿಕೆ! ಪಕ್ಷದಲ್ಲಿ ಗುಸುಗುಸು

Last Updated 19 ಮೇ 2022, 13:19 IST
ಅಕ್ಷರ ಗಾತ್ರ

ರಾಮನಗರ:ದೇವಮೂಲೆಯಲ್ಲಿ ಇರುವ ಮಾಗಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೆ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಎಂಬ ಕಾರಣಕ್ಕೆ ಎಚ್‌.ಡಿ. ಕುಮಾರಸ್ವಾಮಿ ಮಾಗಡಿ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಾರ? ಹೀಗೊಂದು ವದಂತಿ ಜೆಡಿಎಸ್ ಅಂಗಳದಲ್ಲಿ ಹರಿದಾಡುತ್ತಿದೆ. ಜೆಡಿಎಸ್ ಕಾರ್ಯಕರ್ತರೇ ಈ ಮಾತು ಹೇಳತೊಡಗಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅಂತಹ ಸಾಧ್ಯತೆ ಇಲ್ಲ ಎನ್ನುತ್ತಾರೆ ಪಕ್ಷದ ಮುಖಂಡರು.

ಇನ್ನೂ, ರಾಜ್ಯದಾದ್ಯಂತ ಜೆಡಿಎಸ್ ತೊರೆದಿರುವ ನಾಯಕರನ್ನು ಮತ್ತೆ ಪಕ್ಷಕ್ಕೆ ಕರೆತರುವ ಪ್ರಯತ್ನ ನಡೆದಿದ್ದು, ಎಚ್‌.ಸಿ. ಬಾಲಕೃಷ್ಣ ಅವರಿಗೂ ಆಹ್ವಾನ ಬಂದಿದೆ. ಈ ಸಂಬಂಧ ಚರ್ಚೆ ನಡೆದಿದೆ ಎಂದು ಮತ್ತೊಂದು ವದಂತಿ ಹಬ್ಬಿದೆ. ಆದರೆ ಕುಮಾರಸ್ವಾಮಿ ಇದನ್ನು ಈಗಾಗಲೇ ನಿರಾಕರಿಸಿದ್ದು, ಬಾಲಕೃಷ್ಣ ಸಹ ತಾವು ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳುತ್ತ ಬಂದಿದ್ದಾರೆ.

ಎಚ್‌.ಡಿ ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆ ವ್ಯಾಪ್ತಿಯ ಮೂರು ವಿಧಾನಸಭಾಕ್ಷೇತ್ರಗಳಲ್ಲಿಈಗಾಗಲೇ ಸ್ಫರ್ಧೆ ಮಾಡಿದ್ದಾರೆ. ರಾಮನಗರ, ಚನ್ನಪಟ್ಟಣದಲ್ಲಿ ಅವರು ಗೆಲುವು ಕಂಡಿದ್ದರೆ, 1994ರಲ್ಲಿಸಾತನೂರಿನಲ್ಲಿ ಡಿ.ಕೆ ಶಿವಕುಮಾರ್‌ ಅವರ ವಿರುದ್ಧ ಸ್ಪರ್ಧಿಸಿ ಸೋತಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದ ಅವರು, ಎರಡರಲ್ಲೂ ಗೆದ್ದಿದ್ದರು. ಅಂತಿಮವಾಗಿ ರಾಮನಗರ ತೊರೆದು, ಚನ್ನಪಟ್ಟಣವನ್ನು ಅವರು ಉಳಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT