ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರಲ್ಲಿ ಮುಂದುವರಿದ ಐಟಿ ದಾಳಿ: 4 ಮೆಡಿಕಲ್ ಕಾಲೇಜು ಮಾಲೀಕರ ಮನೆ ಮೇಲೆ ದಾಳಿ

Last Updated 18 ಫೆಬ್ರುವರಿ 2021, 9:40 IST
ಅಕ್ಷರ ಗಾತ್ರ

ಮಂಗಳೂರು: ನಗರದ ನಾಲ್ಕು ವೈದ್ಯಕೀಯ ಕಾಲೇಜುಗಳ ಮಾಲೀಕರ ಮನೆ ಮೇಲೆ‌ ದಾಳಿ ನಡೆಸಿರುವ ಐಟಿ ಅಧಿಕಾರಿಗಳು, ಗುರುವಾರವೂ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

260 ಕ್ಕೂ ಅಧಿಕ ಅಧಿಕಾರಿಗಳು ನಗರದಲ್ಲಿದ್ದು, ಅಪಾರ ಪ್ರಮಾಣದ ನಗದು ಪತ್ತೆಯಾಗಿರುವ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಈ ವೈದ್ಯಕೀಯ ಕಾಲೇಜುಗಳ ಪಾಲುದಾರರ ಮನೆ ಮೇಲೂ ಇದೀಗ ದಾಳಿ ಆರಂಭಿಸಲಾಗಿದೆ.

ಶಾಸಕ ಯು.ಟಿ ಖಾದರ್ ಸೋದರ ಡಾ.ಯು.ಟಿ. ಇಫ್ತಿಕಾರ್ ಆಲಿಗೆ ಸೇರಿದ ಮಂಗಳೂರಿನ ಮನೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ನಗರದ ಲೈಟ್ ಹೌಸ್ ಹಿಲ್ ರಸ್ತೆಯ ಮನೆಗೆ ಬಂದಿರುವ‌ ಅಧಿಕಾರಿಗಳು‌ ದಾಖಲೆಗಳನ್ನು‌ ವಶಕ್ಕೆ‌ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.

ಐಟಿ ದಾಳಿಗೆ ಒಳಗಾಗಿರುವ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿನ ಆಡಳಿತದಲ್ಲಿ ಡಾ.ಇಫ್ತಿಕಾರ ಪಾಲುದಾರಿಕೆ ಹೊಂದಿದ್ದಾರೆ ಎನ್ನಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಗುರುವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT