ಮಂಗಳವಾರ, ಅಕ್ಟೋಬರ್ 27, 2020
20 °C

ಶಿರಾ: ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ₹1.68 ಕೋಟಿ ಒಡತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾ: ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ
₹ 1.68 ಕೋಟಿ ಒಡತಿ.

ಅಮ್ಮಾಜಮ್ಮ ಅವರು ₹85.85 ಲಕ್ಷ ಮೌಲ್ಯದ ಚರಾಸ್ತಿ ಹಾಗೂ ₹82.54 ಲಕ್ಷ ಮೌಲ್ಯದ ಸ್ಥಿರಾಸ್ತಿ ಹೊಂದಿ
ದ್ದಾರೆ. ₹69.43 ಲಕ್ಷ ಸಾಲ ಮಾಡಿದ್ದಾರೆ. ಶಿರಾದ ಟಿ.ಸಿ ಬ್ಯಾಂಕ್‌ನಲ್ಲಿ ₹ 2.09 ಲಕ್ಷ ಸೇರಿದಂತೆ ಒಟ್ಟು ಅವರ ಬ್ಯಾಂಕ್‌ ಖಾತೆಯಲ್ಲಿ ₹ 2.49 ಲಕ್ಷ ನಗದು ಇದೆ.  ಅವರ ಬಳಿ ₹60 ಲಕ್ಷ ಮೌಲ್ಯದ 1,200 ಗ್ರಾಂ ಚಿನ್ನ, ₹4.20 ಲಕ್ಷ ಮೌಲ್ಯದ 7 ಕೆ.ಜಿ ಬೆಳ್ಳಿ ಇದೆ. ಶಾಸಕರಾಗಿದ್ದ ಅವರ ಪತಿ ದಿವಂಗತ ಸತ್ಯನಾರಾಯಣ ಹೆಸರಿನಲ್ಲಿ
₹18 ಲಕ್ಷ ಮತ್ತು ₹24.5 ಮೌಲ್ಯದ ಕಾರುಗಳಿವೆ. 

ಭುವನಹಳ್ಳಿ ಗ್ರಾಮದಲ್ಲಿ 12.25 ಎಕರೆ, ಹೊಳಕಲ್ಲು ಗ್ರಾಮದಲ್ಲಿ 3 ಎಕರೆ, ವಡ್ಡನಹಳ್ಳಿ ಗ್ರಾಮದಲ್ಲಿ 3.09 ಎಕರೆ ಜಮೀನು ಹೊಂದಿದ್ದಾರೆ. ₹1.50 ಕೋಟಿ ವೆಚ್ಚದ ವಾಣಿಜ್ಯ ಕಟ್ಟಡ ಹಾಗೂ 30 ವರ್ಷ ಗುತ್ತಿಗೆ ಆಧಾರದ ಮೇಲೆ ಕಲ್ಲು ಗಣಿ ಹೊಂದಿದ್ದಾರೆ. ಪತಿಯ ಹೆಸರಿನಲ್ಲಿ ಬೆಂಗಳೂರಿನ ₹1 ಕೋಟಿ ವೆಚ್ಚದ ನಿವೇಶನ, ಶಿರಾದಲ್ಲಿ ₹20 ಲಕ್ಷ ಮೌಲ್ಯದ ಮನೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು