ಮಂಗಳವಾರ, ಡಿಸೆಂಬರ್ 6, 2022
21 °C

ತುಮಕೂರಿನಲ್ಲೊಂದು ದುಬಾರಿ ದೋಸೆ: ಈ ಚಿನ್ನದ ದೋಸೆಗೆ ₹1 ಸಾವಿರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಒಂದು ಮಸಾಲೆ ದೋಸೆಯ ಬೆಲೆ ಬರೋಬ್ಬರಿ ₹1 ಸಾವಿರ ರೂಪಾಯಿ! ಇದು ಸಾಮಾನ್ಯ ದೋಸೆಯಲ್ಲ; ನಿಜವಾಗಿಯೂ ಚಿನ್ನದ ದೋಸೆ!

– ಇಲ್ಲಿಯ ಗಾಂಧಿನಗರದಲ್ಲಿರುವ ಉಡುಪಿ ಶ್ರೀಕೃಷ್ಣ ಭೋಜನಾಲಯದಲ್ಲಿ ಒಂದು ದೋಸೆ ಬೆಲೆ ₹1,001! ಎಣ್ಣೆ ಬಳಸದೆ ತುಪ್ಪದಿಂದ ದೋಸೆ ತಯಾರಿಸಿ, ಅದರ ಮೇಲ್ಭಾಗದಲ್ಲಿ ಚಿನ್ನದ ಹಾಳೆ ಅಂಟಿಸಲಾಗುತ್ತದೆ. ಇದಕ್ಕೆ ‘ಗೋಲ್ಡನ್‌ ಫಾಯಿಲ್‌ ಎಡಿಬಲ್‌ ಮಸಾಲ ದೋಸೆ’ ಎಂದು ಹೆಸರಿಡಲಾಗಿದೆ.

ಹೋಟೆಲ್‌ನಲ್ಲಿ ಹೊಸ ಪ್ರಯತ್ನ ನಡೆದಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದೋಸೆಯ ರುಚಿ ಸವಿದವರು ಬೇರೆಯವರಿಗೂ ಒಮ್ಮೆ ತಿನ್ನುವಂತೆ ಸಲಹೆ ಮಾಡುತ್ತಿದ್ದಾರೆ. ಹೀಗಾಗಿ ಹೋಟೆಲ್‌ಗೆ ಭೇಟಿ ನೀಡಿ, ಚಿನ್ನದ ದೋಸೆ ಕೇಳುವವರ ಸಂಖ್ಯೆ ಹೆಚ್ಚುತ್ತಿದೆ. ಗುಜರಾತ್‌ನಿಂದ ಚಿನ್ನದ ಹಾಳೆ ತರಿಸಲಾಗುತ್ತದೆ. ಒಮ್ಮೆ 10ರಿಂದ 20 ಚಿನ್ನದ ಹಾಳೆ ಬರುತ್ತವೆ. ದೋಸೆ ಬಿಸಿ ಇರುವಾಗಲೇ ಅದರ ಮೇಲೆ ಹಾಳೆ ರೀತಿಯಲ್ಲಿರುವ ಚಿನ್ನದ ಹಾಳೆ ಅಂಟಿಸಲಾಗುತ್ತದೆ.

‘ಬೆಂಗಳೂರಿನ ಹೋಟೆಲ್‌ ಒಂದರಲ್ಲಿ ಈ ರೀತಿಯ ಚಿನ್ನದ ದೋಸೆ ತಯಾರಿಸುತ್ತಿದ್ದರು. ಅದರ ಪ್ರೇರಣೆಯಿಂದಾಗಿ ನಾವು ಸಹ ಚಿನ್ನದ ದೋಸೆ ಮಾಡುತ್ತಿದ್ದೇವೆ. ಇದನ್ನು ಸೇವಿಸುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಆಗುವುದಿಲ್ಲ. ಬೇಡಿಕೆ ಬಂದಾಗ ಮಾತ್ರ ಮಾಡಿಕೊಡಲಾಗುತ್ತದೆ’ ಎಂದು ಹೋಟೆಲ್‌ ಮಾಲೀಕ ಕಾರ್ತಿಕ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು