ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಪುಸ್ತಕ ಪ್ರಾಧಿಕಾರದ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟ

Last Updated 4 ಜೂನ್ 2022, 12:24 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿ ಹಾಗೂ ಬಹುಮಾನಗಳನ್ನು ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ಇಂದು (ಶುಕ್ರವಾರ) ಪ್ರಕಟಿಸಿದರು.

ಇಂದು ನಡೆದ ಸ್ಥಾಯಿ ಸಮಿತಿ ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಈ ಪ್ರಶಸ್ತಿಗಳ ಬಗ್ಗೆ ವಿಸ್ತೃತ ಚರ್ಚೆ ನಡೆದು ಸರ್ವಾನುಮತದಿಂದ ಪ್ರಶಸ್ತಿಗಳ ಆಯ್ಕೆ ಮಾಡಲಾಯಿತು.
ವಿವರ ಕೆಳಕಂಡಂತಿದೆ.

2021ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿ ವಿಜೇತ ಪಟ್ಟಿ:
ಅತ್ಯುತ್ತಮ ಪ್ರಕಾಶನ ಪ್ರಶಸ್ತಿ (₹1,00,000) - ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು.
ಡಾ. ಎಂ. ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ (₹75,000) - ಡಾ. ಗುರುಲಿಂಗ ಕಾಪಸೆ, ಧಾರವಾಡ.
ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ (₹50,000) - ಡಾ. ಮೋಹನ್ ಆಳ್ವ, ಮೂಡಬಿದರೆ.
ಡಾ. ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ (₹25,000) - ಡಾ. ನಾ. ಸೋಮೇಶ್ವರ, ಬೆಂಗಳೂರು.

2021ನೇ ಸಾಲಿನ ಕನ್ನಡ ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸು ಬಹುಮಾನಗಳ ವಿವರ:

ಪುಸ್ತಕ ಸೊಗಸು ಮೊದಲನೇ ಬಹುಮಾನ (₹25,000) -
ಕೃತಿ - ನಮ್ಮ ದೇಹದ ವಿಜ್ಞಾನ
ಸಂ: ಡಾ. ಟಿ.ಆರ್. ಅನಂತರಾಮು, ಡಾ. ನಾ. ಸೋಮೇಶ್ವರ
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್, ಬೆಂಗಳೂರು

ಪುಸ್ತಕ ಸೊಗಸು ಎರಡನೇ ಬಹುಮಾನ (₹20,000)
ಕೃತಿ - ಅಜ್ಜಿ ಮನೆ ಸವಿ
ಸಂ: ಶ್ರೀಮತಿ ಉದ್ಯಾವರ ವಿಜಯಲಕ್ಷ್ಮಿ ಶೆಣೈ,
ವಿಶೇಷ ಪಬ್ಲಿಕೇಷನ್ಸ್, ಬೆಂಗಳೂರು

ಪುಸ್ತಕ ಸೊಗಸು ಮೂರನೇ ಬಹುಮಾನ (₹10,000)
ಕೃತಿ - ಮಹಾತ್ಮರ ಚರಿತಾಮೃತ
ಲೇ: ಪ್ರಭುಚನ್ನಬಸವ ಸ್ವಾಮೀಜಿ,
ಶ್ರೀ ಗುರುಚನ್ನಬಸವೇಶ್ವರ ಗ್ರಂಥಮಾಲೆ, ಅಥಣಿ

ಮಕ್ಕಳ ಪುಸ್ತಕ ಸೊಗಸು ಬಹುಮಾನ (₹8,000)
ನೋಟ್‌‍ಬುಕ್ - ಮಕ್ಕಳ ಕಥೆಗಳು
ಲೇ: ಡಾ. ಕೆ. ಶಿವಲಿಂಗಪ್ಪ ಹಂದಿಹಾಳು,
ಕವನ ಪ್ರಕಾಶನ, ಬಳ್ಳಾರಿ

ಮುಖಪುಟ ಚಿತ್ರ ವಿನ್ಯಾಸ ಬಹುಮಾನ (₹10,000)
ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ
ಲೇ: ಡಾ. ಮುಜಾಫರ್ ಅಸ್ಸಾದಿ
ಬಹುಮಾನಿತ ಕಲಾವಿದರು: ಶ್ರೀ ಜಿ. ಅರುಣ ಕುಮಾರ್

ಮುಖಪುಟಚಿತ್ರ ಕಲೆಯ ಬಹುಮಾನ (₹8,000)
ರೂಬಿಕ್ಸ್ ಕ್ಯೂಬ್ ಮತ್ತಿತರ ನಾಟಕಗಳು ಕ್ಲೀನ್ ಅಂಡ್ ಕ್ಲಿಯರ್ ಪಾಯಖಾನೆ ಮತ್ತು ಆಯಾಮ
ಲೇ: ಬೇಲೂರು ರಘುನಂದನ್
ಬಹುಮಾನಿತ ಕಲಾವಿದರು : ಶ್ರೀ ಮಂಜುನಾಥ ವಿ.ಎಂ.

ಪುಸ್ತಕ ಮುದ್ರಣ ಸೊಗಸು ಬಹುಮಾನ (₹5,000)
ಸಿರಿ ಬೆಳಕು
ಲೇ: ಶಿ.ರಾ. ಹೂಗಾರ
ಮುದ್ರಣಾಲಯ : ತ್ವರಿತ ಮುದ್ರಣ ಆಫ್ಸೆಟ್ ಪ್ರಿಂಟರ್ಸ್, ಗದಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT