ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

87ನೇ ಕನ್ನಡ ಸಾಹಿತ್ಯ ಸಮ್ಮೇಳನ: ಲಾಂಛನ, ಧ್ಯೇಯವಾಕ್ಯ ಆಹ್ವಾನ

Last Updated 4 ಮಾರ್ಚ್ 2023, 23:45 IST
ಅಕ್ಷರ ಗಾತ್ರ

ಬೆಂಗಳೂರು: ಮಂಡ್ಯದಲ್ಲಿ ನಡೆಯಲಿ ರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಲಾಂಛನ ಹಾಗೂ ಧ್ಯೇಯವಾಕ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಆಹ್ವಾನಿಸಿದೆ.

‘ಮುಂಬರುವ ಸಮ್ಮೇಳನದಲ್ಲಿ ಯಾವುದೆ ಅಚಾತುರ್ಯಕ್ಕೆ ಅವಕಾಶ ನೀಡಬಾರದು ಎನ್ನುವ ಆಶಯದೊಂದಿಗೆ ಸಿದ್ಧತೆಗಳನ್ನು ಆರಂಭಿ
ಸಲಾಗುತ್ತಿದೆ. ಮಂಡ್ಯದಲ್ಲಿ ನಡೆಯಲಿರುವ ಸಮ್ಮೇಳನವು ಸಮಸ್ತ ಕನ್ನಡಿಗರ ಅಕ್ಷರ ಪರಂಪರೆಯ ಹಬ್ಬವಾಗಬೇಕು. ಪ್ರತಿಯೊಬ್ಬ ಕನ್ನಡಿಗನೂ ಈ ನುಡಿ ಜಾತ್ರೆಯ ಭಾಗವಾಗಬೇಕು ಎನ್ನುವುದು ಪರಿಷತ್ತಿನ ಆಶಯವಾಗಿದೆ’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ.

‘ಮಂಡ್ಯದಲ್ಲಿ ನಡೆಯುವ ನುಡಿಜಾತ್ರೆಗೆ ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಕಲೆ ಬಿಂಬಿಸುವುದರೊಂದಿಗೆ, ಮಂಡ್ಯ ಜಿಲ್ಲೆಯ ಮಹತ್ವ ಸಾರುವ ಲಾಂಛನ ಮತ್ತು ಅರ್ಥಪೂರ್ಣ ಧ್ಯೇಯವಾಕ್ಯವನ್ನು ಸಿದ್ಧಪಡಿಸುವ ಅವಕಾಶವನ್ನು ಸಾರ್ವಜನಿಕರಿಗೆ ನೀಡ
ಲಾಗಿದೆ. ಮೇ 31ರೊಳಗೆ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು 560018 ಈ ವಿಳಾಸಕ್ಕೆ ಕಳುಹಿಸಬೇಕು. ಆಯ್ಕೆಯಾದ ಲಾಂಛನ ಹಾಗೂ ಧ್ಯೇಯವಾಕ್ಯವನ್ನು ಅಧಿಕೃತವಾಗಿ ಬಳಸಲಾಗುವುದು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT