ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದೇಶದ ಪ್ರತಿಯಲ್ಲಿ ಅಕ್ಷರ ದೋಷ; ರಾಜ್ಯ ಸರ್ಕಾರದಿಂದಲೇ ‘ಕನ್ನಡ ಕೊಲೆ’!

ಅಧಿಕಾರಿಗಳ ‘ಕನ್ನಡ ಜ್ಞಾನ’ಕ್ಕೆ ಕನ್ನಡಿ ಹಿಡಿದ ಆದೇಶ ಪ್ರತಿ
Last Updated 16 ಜುಲೈ 2022, 6:45 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಫೋಟೊ, ವಿಡಿಯೊ ಮಾಡದಂತೆ ಹೊರಡಿಸಿದ್ದ ಆದೇಶವನ್ನು ಹಿಂಪಡೆದು ರಾಜ್ಯ ಸರ್ಕಾರ ಹೊರಡಿಸಿದ ಆದೇಶದಲ್ಲಿ ಕನ್ನಡವನ್ನು ಅಕ್ಷರಶಃ ಕೊಲೆ ಮಾಡಲಾಗಿದೆ!

ಆ ಮೂಲಕ, ಈ ಆದೇಶ ಸರ್ಕಾರದ ಅಧಿಕಾರಿಗಳ ‘ಕನ್ನಡ ಜ್ಞಾನ’ಕ್ಕೆ ಕನ್ನಡಿ ಹಿಡಿದಿದೆ.

ಸರ್ಕಾರಿ ಕಚೇರಿಗಳಲ್ಲಿ ಫೋಟೊ, ವಿಡಿಯೊ ಮಾಡದಂತೆ ಹೊರಡಿಸಿದ್ದ ಆದೇಶದಿಂದ ಮುಜುಗರಕ್ಕೆ ಒಳಗಾಗುವ ಸಾಧ್ಯತೆಯ ಅರಿವು ಆಗುತ್ತಿದ್ದಂತೆ ಶುಕ್ರವಾರ ತಡರಾತ್ರಿ 2 ಗಂಟೆಗೆ ತರಾತುರಿಯಲ್ಲಿ ಈ ಆದೇಶವನ್ನು ವಾಪಸು ಪಡೆದು ಮರು ಆದೇಶ ಹೊರಡಿಸಲಾಗಿದೆ. ಅಧಿಕಾರಿಗಳು ನಿದ್ದೆಗಣ್ಣಿನಿಂದ ಮರು ಆದೇಶ ಹೊರಡಿಸಿದಂತಿದೆ.

ಆದೇಶದ ಪ್ರತಿಯಲ್ಲಿ ಆರಂಭದಿಂದ ಕೊನೆಯವರೆಗೆ ತಪ್ಪುಗಳೇ ನುಸುಳಿವೆ.

ಸರ್ಕಾರದ ಆದೇಶದ ಪ್ರತಿ
ಸರ್ಕಾರದ ಆದೇಶದ ಪ್ರತಿ

ಆದೇಶ ಪ್ರತಿಯಲ್ಲಿರುವಅಕ್ಷರ ದೋಷಗಳು
* ನಡಾವಳಿಗಳು– ನಡವಳಿಗಳು
* ಪ್ರಸ್ತಾವನೆ– ಪ್ರಸತ್ತಾವನೆ
* ಮೇಲೆ– ಮೇಲೇ
* ಭಾಗ–1– ಬಾಗ–1
* ಕರ್ನಾಟಕ– ಕರ್ನಾಟಾ
* ಆಡಳಿತ– ಆಡಳಿದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT