ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘40 ವಿಧಾನಸಭಾ ಕ್ಷೇತ್ರಗಳಿಗೆ ತಲಾ ಐದು ಆಮ್ಲಜನಕ ಸಾಂದ್ರಕ ಹಂಚಿಕೆ’

Last Updated 10 ಜೂನ್ 2021, 21:57 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ಸೋಂಕಿತರಿಗೆ ತಂತ್ರಜ್ಞಾನದ ನೆರವಿನಿಂದ ಚಿಕಿತ್ಸೆ ನೀಡಲು 200 ಆಮ್ಲಜನಕ ಸಾಂದ್ರಕಗಳೂ ಸೇರಿದಂತೆ ‌₹ 2.5 ಕೋಟಿ ಮೊತ್ತದ ವಿವಿಧ ಅತ್ಯಾಧುನಿಕ ವೈದ್ಯಕೀಯ ಸಾಮಗ್ರಿಗಳನ್ನು ಕೆಲವು ಕಂಪನಿಗಳು ‘ಸಿ-ಕ್ಯಾಂಪ್‌’ ಮೂಲಕ ರಾಜ್ಯ ಸರ್ಕಾರಕ್ಕೆ ಕೊಡುಗೆಯಾಗಿ ನೀಡಿವೆ.

ರಾಜ್ಯ ಕೋವಿಡ್‌ ಕಾರ್ಯಪಡೆ ಮುಖ್ಯಸ್ಥರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ ಅವರಿಗೆ ಸಿ-ಕ್ಯಾಂಪ್‌ ಸಂಸ್ಥೆಯ ಸಿಇಒ ಡಾ. ತಸ್ಲೀಮಾರಿಫ್‌ ಸಯೀದ್ ಇವನ್ನು ಹಸ್ತಾಂತರಿಸಿದರು.

‘200 ಆಮ್ಲಜನಕ ಸಾಂದ್ರಕಗಳನ್ನು ಹುವೈ ಕಂಪನಿ ನೀಡಿದ್ದು ತಲಾ ಐದರಂತೆ 40 ವಿಧಾನಸಭಾ ಕ್ಷೇತ್ರಗಳಿಗೆ ಹಂಚ
ಲಾಗುವುದು. ಟುರ್ಟಲ್‌ ಶೆಲ್‌ ಟೆಕ್ನಾಲಜೀಸ್‌ ಕಂಪನಿ ಡಾಸಿ ಎನ್ನುವ 200 ಮಾನಿಟರಿಂಗ್‌ ಸಿಸ್ಟಂಗಳನ್ನು ನೀಡಿದೆ. ಸೋಂಕಿತ ವ್ಯಕ್ತಿ ಎಲ್ಲೇ ಇದ್ದರೂ ಇದರ ಮೂಲಕವೇ ಆಮ್ಲಜನಕ, ಪಲ್ಸ್‌ ರೇಟ್, ರಕ್ತದೊತ್ತಡ ಪರಿಶೀಲಿಸಬಹುದು. ಇದರಿಂದ ಸಿಬ್ಬಂದಿ ಅಗತ್ಯವಿಲ್ಲದೆ ನಿಖರ ಮಾಹಿತಿ ಸಿಗಲಿದೆ’ ಎಂದು ಅಶ್ವತ್ಥನಾರಾಯಣ ಹೇಳಿದರು.

‘ಇನ್ಯಾಕಲ್‌ ಟೆಕ್ನಾಲಜೀಸ್‌ ಸಂಸ್ಥೆ ಆಮ್ಲಜನಕ ಪೂರೈಕೆಯ ಅತ್ಯಾಧುನಿಕ 15 ಯಂತ್ರಗಳನ್ನು ನೀಡಿದೆ. ಲಸಿಕೆಯನ್ನು ಯಾವುದೇ ಉಷ್ಣಾಂಷದಲ್ಲೂ ಸಾಗಣೆಗೆ ನೆರವಾಗುವ ಕಿಟ್‌ ಅನ್ನು ಸಿ-ಕ್ಯಾಂಪ್‌ ಸಂಸ್ಥೆ ನೀಡಿದೆ ಎಂದು ಹೇಳಿದರು.

ರಾಯಚೂರು ಶಾಸಕ ಡಾ.ಶಿವರಾಜ್‌ ಪಾಟೀಲ್‌ ಮತ್ತು ಬಸವಕಲ್ಯಾಣ ಶಾಸಕ ಶರಣು ಸಲಗರ ಅವರಿಗೆ ತಲಾ ಐದು ಆಮ್ಲಜನಕ ಸಾಂದ್ರಕಗಳನ್ನು ಅಶ್ವತ್ಥನಾರಾಯಣ ವಿತರಿಸಿದರು.

ಹುವೈ ಇಂಡಿಯಾ ಕಂಪನಿಯ ಸಹಾಯಕ ಉಪಾಧ್ಯಕ್ಷ ಗಿಲ್ಬರ್ಟ್‌ ನಾಥನ್‌, ಇನ್ಯಾಕಲ್‌ ಟೆಕ್ನಾಲಜೀಸ್‌ ಸಂಸ್ಥೆಯ ಸಹ ಸಂಸ್ಥಾಪಕ ನಿತೇಶ್‌ ಜಾಹಂಗೀರ್‌, ಟುರ್ಟಲ್‌ ಶೆಲ್‌ ಟೆಕ್ನಾಲಜೀಸ್‌ನ ಸಹ ಸಂಸ್ಥಾಪಕ ಮುದಿತ್‌ ದಂಡವತೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT