ಗೋಕಾಕ (ಬೆಳಗಾವಿ ಜಿಲ್ಲೆ): 'ಕಾಂಗ್ರೆಸ್ಸಿಗರು ನನ್ನನ್ನು ನಾಯಿ ಎಂದು ಮೂದಲಿಸುತ್ತಿದ್ದಾರೆ. ಹೌದು. ನಾನು ಕರ್ನಾಟಕದ ಏಳು ಕೋಟಿ ಜನರ ನಿಯತ್ತಿನ ನಾಯಿ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಗೋಕಾಕದಲ್ಲಿ ಮಂಗಳವಾರ ₹2,430 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
'ನನ್ನ ಅಭಿವೃದ್ಧಿ ಕೆಲಸ ಹಾಗೂ ಸಾಮಾಜಿಕ ನ್ಯಾಯದ ನಡೆ ಕಾಂಗ್ರೆಸ್ಸಿಗರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಶಕುನಿ, ನಾಯಿ ಎಂದು ನನ್ನನ್ನು ಬೈಯ್ಯುತ್ತಿದ್ದಾರೆ. ಆದರೆ ಅವರೆಲ್ಲ ಗೋಮುಖ ವ್ಯಾಘ್ರರು ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ' ಎಂದರು.
'ರಾಜ್ಯ ರಾಜಕಾರಣದಲ್ಲಿ ಬೆಳಗಾವಿ ಜಿಲ್ಲೆ ಅತ್ಯಂತ ಪ್ರಭಾವಿ. ಈ ಜಿಲ್ಲೆಯ ನಿರ್ಧಾರವೇ ರಾಜ್ಯದ ನಿರ್ಧಾರ ಕೂಡ ಆಗುತ್ತದೆ' ಎಂದೂ ಹೇಳಿದರು.
'ಪರಿಶಿಷ್ಟ ಜನರೆಲ್ಲ ಒಂದಾದರೆ; ನೀವು ಹೇಳಿದವರದ್ದೇ ಆಡಳಿತ ನಡೆಯುತ್ತದೆ' ಎಂದೂ ಸಿ.ಎಂ ಹೇಳಿದರು.
ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, 'ಕರ್ನಾಟಕದಲ್ಲಿ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡುವ ಏಕಮಾತ್ರ ಪಕ್ಷ ಬಿಜೆಪಿ. ಹಾಗಾಗಿ ಲಿಂಗಾಯತ ಎಲ್ಲ ಪಂಗಡದವರೂ ಒಂದಾಗಿರಿ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ಮತಗಳು ಒಡೆದುಹೋಗದಂತೆ ಎಚ್ಚರಿಕೆ ವಹಿಸಿ' ಎಂದರು.
'ರಾಹುಲ್ ಗಾಂಧಿ ಆದಿಯಾಗಿ ಎಲ್ಲ ಕಾಂಗ್ರೆಸ್ಸಿಗರೂ ಬೋಗಸ್ ಮಾತನಾಡುತ್ತಾರೆ. ಅವರು ನೀಡಿದ ಗ್ಯಾರಂಟಿಗಳನ್ನು ಯಾರೂ ಪೂರೈಸಲು ಸಾಧ್ಯವಿಲ್ಲ. ಈ ಬೋಗಸ್ ಭರವಸೆ ನಂಬಬೇಡಿ' ಎಂದು ಶಾಸಕ ರಮೇಶ ಜಾರಕಿಹೊಳಿ ಕಿಡಿಕಾರಿದರು.
ಇವನ್ನೂ ಓದಿ...
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.