ಬೇಲೂರು (ಹಾಸನ): ಇಲ್ಲಿನ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ, ಬೇಲೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಚ್.ಕೆ.ಸುರೇಶ್ ಅವರು 15 ದಿನಗಳ ಅವಧಿಯಲ್ಲಿ ಚಂದನಹಳ್ಳಿ, ಬೇಲೂರು ಸಮೀಪದ ನೀಡಗೊಡು ಮತ್ತು ಅಗಸರಹಳ್ಳಿಯಲ್ಲಿ ಗ್ರಾಮಸ್ಥರಿಗೆ ಭರ್ಜರಿ ಮದ್ಯ ಮತ್ತು ಬಾಡೂಟ ನೀಡಿದ್ದಾರೆ.
2018ರ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಅವರು ಮತದಾರರ ಮೊಬೈಲ್‌ಫೋನ್ ಸಂಖ್ಯೆಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು. ಈಗ ಅವರ ಬೆಂಬಲಿಗರು ಕರೆ ಮಾಡಿ, ‘ನಾವು ಎಚ್.ಕೆ. ಸುರೇಶ್ ಕಚೇರಿಯಿಂದ ಕರೆ ಮಾಡುತ್ತಿದ್ದೇವೆ. ಔತಣಕೂಟಕ್ಕೆ ತಪ್ಪದೆ ಬರಬೇಕು’ ಎಂದು ಆಹ್ವಾನಿಸುತ್ತಿದ್ದಾರೆ.
ಅಗಸರಹಳ್ಳಿಯ ಔತಣಕೂಟದಲ್ಲಿ ಜನ ಪಾನಮತ್ತರಾಗಿ ಬಿದ್ದಿದ್ದರೆನ್ನಲಾದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಸುರೇಶ್ ಅವರೇ ಗ್ರಾಮಸ್ಥರನ್ನು ಸಂತೈಸುತ್ತಿರುವ ದೃಶ್ಯಗಳೂ ಇವೆ.
‘ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಆಯೋಜಿಸಿದ್ದೇನೆಯೇ ಹೊರತು ಔತಣಕೂಟವನ್ನು ನಡೆಸಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮ ಪಕ್ಷದ ಕಾರ್ಯಕರ್ತರ ಗೃಹ ಪ್ರವೇಶ ಕಾರ್ಯಕ್ರಮದ ಫೋಟೊಗಳಿವೆ. ಜನ ಕುಡಿದು ಬಿದ್ದಿರುವ ವಿಡಿಯೊಗಳಿಗೂ ನನಗೂ ಸಂಬಂಧವಿಲ್ಲ’ ಎಂದು ಎಚ್.ಕೆ.ಸುರೇಶ್ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.