ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಸಾರಿ 18 ರ ವಯೋಮಾನದ ಹೊಸ ಮತದಾರ ಸಂಖ್ಯೆ ಎಷ್ಟು ಗೊತ್ತಾ!

Last Updated 29 ಮಾರ್ಚ್ 2023, 11:28 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ 2023 ಕ್ಕೆ ರಣಕಹಳೆ ಮೊಳಗಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಇಂದು ವೇಳಾಪಟ್ಟಿ ಘೋಷಣೆ ಮಾಡಿದರು.

ಆ ಪ್ರಕಾರ ಈ ಬಾರಿಯ ಚುನಾವಣೆ ಕೆಲವು ವಿಶೇಷತೆಗಳಿಗೆ ಸಾಕ್ಷಿಯಾಗುತ್ತಿದೆ.

ವಿಶೇಷವೆಂದರೆ ಇದೇ ಮೊದಲ ಬಾರಿಗೆ, ಸಾರ್ವತ್ರಿಕ ಚುನಾವಣೆಯ ಮತದಾನಕ್ಕೂ ಮುನ್ನ 18 ವರ್ಷಕ್ಕೆ ಕಾಲಿಡುತ್ತಿರುವ ಯುವ ಮತದಾರರಿಗೆ ಭಾರೀ ಸಂಖ್ಯೆಯಲ್ಲಿ ಮತದಾನ ಮಾಡಲು ಅವಕಾಶ ಸಿಗುತ್ತಿದೆ.

ಚುನಾವಣಾ ಆಯೋಗದ ಶ್ರಮ ಹಾಗೂ ವಿಶೇಷ ಡಿಜಿಟಲ್ ಅಭಿಯಾನದ ಮೂಲಕ ಈ ಪ್ರಕ್ರಿಯೆಗೆ ಮಹತ್ವ ಸಿಕ್ಕಿದೆ. ಬರುವ ಏಪ್ರಿಲ್ 1ಕ್ಕೆ 18 ವರ್ಷಕ್ಕೆ ಕಾಲಿಡುತ್ತಿರುವವರಿಗೆ ಅಥವಾ ಕಾಲಿಟ್ಟವರಿಗೆ ಮತದಾನ ಮಾಡಲು ಅವಕಾಶ ಸಿಗುತ್ತಿದೆ. ಕರ್ನಾಟಕ ಸಾರ್ವತ್ರಿಕ ಚುನಾವಣೆಯಲ್ಲಿ ಇದು ಮೊದಲ ಬಾರಿಗೆ ಎನ್ನಲಾಗಿದೆ.

18 ವರ್ಷಕ್ಕೆ ಕಾಲಿಡುತ್ತಿರುವ ಹೊಸ ಮತದಾರರ ಸಂಖ್ಯೆ 9,58,806 ದಾಖಲಾತಿ ಆಗಿದ್ದು, ಇಷ್ಟೊಂದು ಸಂಖ್ಯೆಯಲ್ಲಿ ಈ ವಯೋಮಾನದ ಹೊಸ ಮತದಾರರ ಸಂಖ್ಯೆ ನೋಂದಣಿಯಾಗಿದ್ದು ಇದೇ ಮೊದಲು ಎನ್ನಲಾಗಿದೆ.

2022ರ ಜನವರಿ 2ರಿಂದ, 2023ರ ಜನವರಿ 1ರವರಗೆ ಈ ಮತದಾರರು ನೋಂದಣಿಯಾಗಿದ್ದಾರೆ. ಇವರಲ್ಲಿ ಇದೇ ಏಪ್ರಿಲ್ 1ಕ್ಕೆ 18 ವರ್ಷಕ್ಕೆ ಕಾಲಿಡುವವರಿದ್ದಾರೆ. ಇನ್ನು ಕೆಲವರು 18 ವರ್ಷಕ್ಕೆ ಕಾಲಿಟ್ಟಿದ್ದಾರೆ.

ಇನ್ನೊಂದು ವಿಶೇಷವೆಂದರೆ ಇದೇ ಮೊದಲ ಬಾರಿಗೆ 80+ ವಯಸ್ಸು ಹೊಂದಿರುವ ಹಿರಿಯ ನಾಗರಿಕರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಅಂದರೆ ಇವರು ಮತಗಟ್ಟೆಗಳಿಗೆ ಹೋಗುವ ಅವಶ್ಯಕತೆ ಇರುವುದಿಲ್ಲ. ಮತಗಟ್ಟೆ ಅಧಿಕಾರಿಗಳೇ ಅಂತವರ ಮನೆಗೆ ಹೋಗಿ ಮತ ಹಾಕಿಸಿಕೊಂಡು ಬರಲಿದ್ದಾರೆ. ಇವರ ಸಂಖ್ಯೆ 5,60,908 ಎಂದು ಗುರುತಿಸಲಾಗಿದ್ದು, ರಾಜ್ಯದಲ್ಲಿ ಒಟ್ಟಾರೆ ಹಿರಿಯ ನಾಗರಿಕರ ಮತದಾರರು 12,15,142 ಇದ್ದಾರೆ.

ರಾಜ್ಯದಲ್ಲಿ ಒಟ್ಟು ಮತದಾರರ ಸಂಖ್ಯೆ 5,24,11,557.

ಮೇ 10 ರಂದು ಬುಧವಾರ ಮತದಾನ

2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಘೋಷಣೆ ಮಾಡಿದೆ. ಆ ಪ್ರಕಾರ ಇಂದಿನಿಂದಲೇ ನೀತಿ ಸಂಹಿತಿ ಜಾರಿಯಾಗಿದ್ದು ಏಪ್ರಿಲ್ 13ರಂದು ಅಧಿಸೂಚನೆ ಹೊರಡಿಸಲಾಗುತ್ತದೆ.

ನಾಮಪತ್ರ ಸಲ್ಲಿಸಲು ಏಪ್ರಿಲ್ 20 ಕಡೆಯ ದಿನ, ಏಪ್ರಿಲ್ 21 ರಂದು ನಾಮಪತ್ರಗಳ ಪರಿಶೀಲನೆ ನಡೆಯುತ್ತದೆ. ಏಪ್ರಿಲ್ 24 ನಾಮಪತ್ರಗಳನ್ನು ವಾಪಸ್ ಪಡೆಯಲು ಕಡೆಯ ದಿನವಾಗಿರುತ್ತದೆ.

ಮೇ 10 ರಂದು ಬುಧವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು ಮೇ 13 ರಂದು ಶನಿವಾರ ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಅಸೆಂಬ್ಲಿ ಅವಧಿ ಮೇ 23ಕ್ಕೆ ಮುಗಿಯುತ್ತದೆ. ಅಷ್ಟೊರಳಗೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಬೇಕು.

ಹೀಗೆ ಸಹಜವಾಗಿ 2013 ಹಾಗೂ 2018ರ ಕರ್ನಾಟಕ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗೆ ವೇಳಾಪಟ್ಟಿ ಏನಿತ್ತು? ಎಂಬ ಕುತೂಹಲ ಬಹುತೇಕರಲ್ಲಿ ಇರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT