ಭಾನುವಾರ, ಏಪ್ರಿಲ್ 2, 2023
33 °C
ವಿಧಾನಸೌಧದ ಪ್ರತಿ ಗೋಡೆಗಳು ಕಾಸು– ಕಾಸು ಎನ್ನುತ್ತಿದ್ದವು

ಬಸವಣ್ಣ, ಕುವೆಂಪು, ಶರೀಫರ ಆಣೆ ಉಚಿತ ವಿದ್ಯುತ್‌ ಕೊಡುತ್ತೇವೆ: ಡಿಕೆ ಶಿವಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಸವಣ್ಣನ ಆಣೆ, ಕುವೆಂಪು ಆಣೆ, ಕನಕದಾಸರ ಆಣೆ, ಶರೀಫರ ಆಣೆ 200 ಯುನಿಟ್ ಕರೆಂಟ್ ಅನ್ನು ಉಚಿತವಾಗಿ ನಿಮ್ಮ ಮನೆಗೆ ಕೊಟ್ಟೇ ಕೊಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಹೇಳಿದರು.

ನಗರದ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿ ಗುರುವಾರ ನಡೆದ ‘ಪ್ರಜಾಧ್ವನಿ ಯಾತ್ರೆ’ಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಈಶ್ವರಪ್ಪ ಲಂಚ ತಗೊಂಡು ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿಗೆ ಕಾರಣವಾಗಿಲ್ಲವಾ? ನಾವು ಆಗ ವಿಧಾನಸೌಧದಲ್ಲಿ ಮಲಗಿದ್ದೆವು. ವಿಧಾನಸೌಧದ ಪ್ರತಿ ಗೋಡೆಗಳು ಕಾಸು– ಕಾಸು ಎನ್ನುತ್ತಿದ್ದವು. ಸರ್ಕಾರಿ ಕಚೇರಿಯಲ್ಲಿ ಕಾಸಿಲ್ಲದೆ ಕೆಲಸ ಆಗುತ್ತೇನ್ರಿ? ಧಂ ಇದೆಯಾ ಎಂದು ಸಿಎಂ ಕೇಳುತ್ತಾರೆ. ಬನ್ನಿ ಧಮ್‌ ಇದೆ ತೋರಿಸುತ್ತೇವೆ ಎಂದು ಸಿಎಂ ಬೊಮ್ಮಾಯಿ ಅವರಿಗೆ ಸವಾಲು ಹಾಕಿದರು.  

ಕಾಂಗ್ರೆಸ್‌ ಸೇರೋಕೆ ಎಂಎಲ್‌ಎಗಳು   ಸಿದ್ಧ  

‘ನಿಮ್ಮ ಹಿರೇಕೇರೂರು ಮಾಜಿ ಶಾಸಕ (ಯು.ಬಿ.  ಬಣಕಾರ) ದಡ್ಡ ರೇನ್ರಿ? ಯಡಿಯೂರಪ್ಪ ಮತ್ತು ಬೊಮ್ಮಾಯಿ ಬಲಗೈ ಬಂಟರಾಗಿದ್ದ ಅವರು ಈಗ ಕಾಂಗ್ರೆಸ್ ಸೇರಿದ್ದಾರೆ. ಹಾವೇರಿ ಜಿಲ್ಲೆಯ ಲ್ಲಿ ಕಾಂಗ್ರೆ ಸ್  ಸೇರೋಕೆ ಶಾಸಕರುಗಳು ಸಿದ್ಧವಾಗಿದ್ದಾರೆ. ನನ್ನ ಹತ್ರ ಜಾಗ ಇಲ್ಲ ಅಂತ ನಿಲ್ಲಿಸಿದ್ದೇನೆ. ಕೊಟ್ಟ ಕುದುರೆ ಏರದವನು ಶೂರನೂ ಅಲ್ಲ, ಧೀರನೂ ಅಲ್ಲ ಎಂದು ಟೀಕಿಸಿದರು. 

  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು