ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರ್ದು ಹೇರಿಕೆಯನ್ನು ಏಕೆ ವಿರೋಧಿಸುವುದಿಲ್ಲ: ವಿವಾದಕ್ಕೆ ಕಾರಣವಾದ ಯತ್ನಾಳ ಹೇಳಿಕೆ

Last Updated 20 ಡಿಸೆಂಬರ್ 2021, 19:46 IST
ಅಕ್ಷರ ಗಾತ್ರ

ಬೆಳಗಾವಿ: ‘ಹಿಂದಿ ಹೇರಿಕೆಯನ್ನು ವಿರೋಧಿಸುತ್ತೀರಿ. ಆದರೆ, ಉರ್ದು ಹೇರಿಕೆಯನ್ನು ಏಕೆ ವಿರೋಧಿಸುವುದಿಲ್ಲ’ ಎಂದು ಬಿಜೆಪಿಯ ಬಸನಗೌಡಪಾಟೀಲ ಯತ್ನಾಳ ವಿಧಾನಸಭೆಯಲ್ಲಿ ಹೇಳಿದ್ದು ಗದ್ದಲಕ್ಕೆ ಕಾರಣವಾಯಿತು.

ಎಂಇಎಸ್‌ ಪುಂಡಾಟದ ವಿಷಯ ಮಾತನಾಡುವಾಗ ಉರ್ದು ಭಾಷೆಯ ಪ್ರಸ್ತಾಪಿಸಿದ್ದು, ಕಾಂಗ್ರೆಸ್‌ ಸದಸ್ಯರನ್ನು ಕೆರಳಿಸಿತು. ಯತ್ನಾಳ ಅವರ ಮಾತಿಗೆ ಅಡ್ಡಿಪಡಿಸಿದರು. ‘ಒಂದು ಸಮುದಾಯವನ್ನು ಗುರಿ ಮಾಡಿಕೊಂಡು ಟೀಕಿಸುತ್ತಿದ್ದಾರೆ’ ಎಂದು ದೂರಿದರು.

ಭಾರತದಲ್ಲಿ ಕನ್ನಡ, ಮರಾಠಿಯಂತಹ ಭಾಷೆಗಳು ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಭಾರತ ಇರುತ್ತದೆ. ಈ ಭಾಷೆಗಳು ಹೋದರೆ ಎಲ್ಲ ಕಡೆ ಬರೀ ಉರ್ದು ಬೋರ್ಡ್‌ಗಳನ್ನು ಮಾತ್ರ ನೋಡಬೇಕಾಗುತ್ತದೆ ಎಂದು ಯತ್ನಾಳ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT