ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದನದಲ್ಲಿ ಪ್ರತಿಧ್ವನಿಸಿದ ವೈದ್ಯರ ಕೊರತೆ

Last Updated 23 ಫೆಬ್ರುವರಿ 2023, 22:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇರುವ ವಿಷಯ ಗುರುವಾರ
ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು.

ಕಾಂಗ್ರೆಸ್‌ನ ಯಶವಂತರಾಯಗೌಡ ಪರವಾಗಿ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್‌ ಸಿಂಗ್‌ ಮತ್ತು ಬಿಜೆಪಿಯ ಹರತಾಳು ಹಾಲಪ್ಪ ಪ್ರತ್ಯೇಕವಾಗಿ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದರು. ಎರಡೂ ಸಂದರ್ಭಗಳಲ್ಲಿ ವೈದ್ಯರ ಕೊರತೆ ಕುರಿತು ಚರ್ಚೆ ನಡೆಯಿತು.

‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರು ಸೇವೆ ಸಲ್ಲಿಸಲು ಹಿಂದೇಟು ಹಾಕುತ್ತಾರೆ’ ಎಂದರು. ‘ವೈದ್ಯರು ನಗರ ಪ್ರದೇಶದಲ್ಲಿ ಇರಲು ಬಯಸುತ್ತಾರೆ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಕೊರತೆ ಇದೆ’ ಎಂದು ಸುಧಾಕರ್‌ ಉತ್ತರಿಸಿದರು.

ಸಾಗರ ಉಪ ವಿಭಾಗೀಯ ಆಸ್ಪತ್ರೆಗೆ ಸಂಬಂಧಿಸಿದ ಪ್ರಶ್ನೆ ವೇಳೆಯೂ ವೈದ್ಯರ ಕೊರತೆ ಪ್ರಸ್ತಾಪಿಸಿದ ಹಾಲಪ್ಪ, ‘ವೈದ್ಯರಿಗೆ ವೇತನ ಕಡಿಮೆ ಇದೆ. ಪ್ರಾಧ್ಯಾಪಕರು, ಐಎಎಸ್‌ ಅಧಿಕಾರಿಗಳಿಗೆ ಲಕ್ಷಗಟ್ಟಲೆ ಸಂಬಳ ನೀಡಲಾಗುತ್ತಿದೆ. ವೈದ್ಯರಿಗೆ ₹ 40,000ದಿಂದ ₹ 90,000 ಮಾತ್ರ ಇದೆ. ವೈದ್ಯರಿಗೂ ಹೆಚ್ಚಿನ ವೇತನ ನೀಡಬೇಕು’ ಎಂದು ಆಗ್ರಹಿಸಿದರು.

ಬಿಜೆಪಿಯ ಕಳಕಪ್ಪ ಬಂಡಿ ಕೂಡ ಈ ಬೇಡಿಕೆ ಬೆಂಬಲಿಸಿದರು.

ವಿರೋಧ ಪಕ್ಷದ ಉಪ ನಾಯಕ ಯು.ಟಿ. ಖಾದರ್‌ ಮಾತನಾಡಿ, ‘ವೈದ್ಯರ ವೇತನ ಈಗ ಹಿಂದಿಗಿಂತ ಹೆಚ್ಚಾಗಿದೆ. ವೇತನಕ್ಕಿಂತಲೂ ಅವರಿಗೆ ಸರಿಯಾದ ಗೌರವ ನೀಡಬೇಕು. ದೌರ್ಜನ್ಯ ತಡೆಯಬೇಕು. ಆಗ ಹೆಚ್ಚಿನ ವೈದ್ಯರು ಸರ್ಕಾರಿ ಸೇವೆಗೆ ಬರುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT