ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲದಕ್ಕೂ ಕರ್ನಾಟಕ ಬಂದ್ ಮಾಡುವುದರಿಂದ ಪ್ರಯೋಜನವಿಲ್ಲ: ಎಚ್.ಡಿ. ಕುಮಾರಸ್ವಾಮಿ

Last Updated 25 ಡಿಸೆಂಬರ್ 2021, 12:58 IST
ಅಕ್ಷರ ಗಾತ್ರ

ರಾಮನಗರ: ಎಲ್ಲದಕ್ಕೂ ಕರ್ನಾಟಕ ಬಂದ್ ಮಾಡುವುದರಿಂದ ಪ್ರಯೋಜನ ಇಲ್ಲ. ಬದಲಿಗೆ ಎಂಇಎಸ್‌ ಸೇರಿದಂತೆ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಸರ್ಕಾರ ಮುಂದಾಗಬೇಕು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಚನ್ನಪಟ್ಟಣದಲ್ಲಿ ಶನಿವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಇದೇ 31ರಂದು ನಮ್ಮ ರಾಜ್ಯದಲ್ಲಿ ಬಂದ್‌ಗೆ ಕರೆ ನೀಡಲಾಗಿದೆ. ಆದರೆ ಇದರಿಂದ ಮಹಾರಾಷ್ಟ್ರಕ್ಕೆ ಏನು ತೊಂದರೆ ಆಗದು. ಬಂದ್ ಮಾಡುವುದರಿಂದ ನಮ್ಮಲ್ಲಿನ ಸಣ್ಣ ವ್ಯಾಪಾರಿಗಳಿಗೆ, ಕೂಲಿ ಕಾರ್ಮಿಕರಿಗೆ ಆಗುವ ತೊಂದರೆ ಕುರಿತು ಕರೆ ನೀಡಿದವರು ಯೋಚಿಸಬೇಕು. ಹೋರಾಟಗಾರರು ಇದರ ಬದಲು ಸರ್ಕಾರದ ಮೇಲೆ ಬೇರೆ ಮಾರ್ಗಗಳ ಮೂಲಕ ಒತ್ತಡ ಹೇರುವ ಪ್ರಯತ್ನ ಮಾಡಬೇಕು’ ಎಂದು ಸಲಹೆ ನೀಡಿದರು.

ವ್ಯರ್ಥ ಕಲಾಪ; ಈ ಬಾರಿ ಬೆಳಗಾವಿಯ ವಿಧಾನಮಂಡಲ ಕಲಾಪ ಸಂಪೂರ್ಣ ವ್ಯರ್ಥ ಆಗಿದೆ. ರಾಜ್ಯದ ಅಭಿವೃದ್ಧಿ ಬಗ್ಗೆ ಅಲ್ಲಿ ಚರ್ಚೆ ಆಗಲಿಲ್ಲ. ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆಯೂ ಚರ್ಚಿಸಲಿಲ್ಲ. ಬದಲಾಗಿ ಸಂಡೂರು ತಹಶೀಲ್ದಾರ್, ಬೈರತಿ ಬಸವರಾಜು ಬಗ್ಗೆ ವ್ಯರ್ಥ ಚರ್ಚೆ ಆಯಿತು. ಕೊನೆಯಲ್ಲಿ ಮತಾಂತರ ವಿಚಾರ ತರಲಾಯಿತು ಎಂದು ಆಕ್ಷೇಪ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT